ಪಿನ್ನಿ
ಗೋಚರ
ಪಿನ್ನಿ ಒಂದು ಬಗೆಯ ಪಂಜಾಬಿ ಮತ್ತು ಉತ್ತರ ಭಾರತೀಯ ಪಾಕಶೈಲಿಯ ಖಾದ್ಯ. ಇದನ್ನು ಹೆಚ್ಚಾಗಿ ಚಳಿಗಾಲದಲ್ಲಿ ತಿನ್ನಲಾಗುತ್ತದೆ. ಇದನ್ನು ಭೋಜನ ನಂತರ ತಿನ್ನುವ ಸಿಹಿ ತಿನಿಸಾಗಿ ಬಡಿಸಲಾಗುತ್ತದೆ. ಇದನ್ನು ದೇಸಿ ತುಪ್ಪ,[೧] ಗೋಧಿ ಹಿಟ್ಟು, ಬೆಲ್ಲ ಮತ್ತು ಬಾದಾಮಿಗಳಿಂದ ತಯಾರಿಸಲಾಗುತ್ತದೆ. ಒಣದ್ರಾಕ್ಷಿಗಳನ್ನು ಕೂಡ ಬಳಸಬಹುದು. ಉದ್ದಿನ ಹಿಟ್ಟಿನ ಪಿನ್ನಿ ಪಿನ್ನಿಯ ಒಂದು ವಿಧವಾಗಿದೆ.[೨]
ಘಟಕಾಂಶಗಳು
[ಬದಲಾಯಿಸಿ]ಹೆಚ್ಚಿನ ರುಚಿಗಾಗಿ, ಪಿನ್ನಿಯಲ್ಲಿ ಖೋವಾವನ್ನು ಬಳಸಲಾಗುತ್ತದೆ.[೩] ಪಿನ್ನಿ ದೀರ್ಘ ಕಾಲದವರೆಗೆ ಹಾಳಾಗುವುದಿಲ್ಲ ಮತ್ತು ಇವನ್ನು ತಣ್ಣಗಾಗಿಸುವುದು ಅಗತ್ಯವಿಲ್ಲ. ಪಿನ್ನಿಗಳ ಮೇಲೆ ಕುಟ್ಟಿದ ಏಲಕ್ಕಿ ಪುಡಿಯನ್ನು ಉದುರಿಸಲಾಗುತ್ತದೆ ಮತ್ತು ಸಾಧ್ಯವಾದರೆ ಬಿಸಿಯಾಗಿ ಚಹಾದೊಂದಿಗೆ ಅಥವಾ ಬಿಸಿ ಕ್ಷೀರೋತ್ಪನ್ನಗಳೊಂದಿಗೆ ಬಡಿಸಲಾಗುತ್ತದೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ "The Exquisite World of Indian Cuisine". p. 37. Retrieved 20 December 2014.
- ↑ "Companionship and Sexuality: Based on Ayurveda and the Hindu Tradition". Books.google.com. Retrieved 20 December 2014.
- ↑ "Mama's Punjabi Recipes — Atte Ki Pinni (Sweet Wheat Flour Balls) - Indo American News". Indoamerican-news.com. Retrieved 15 December 2017.
- ↑ "Pinni recipes". Khanapakana.com. Archived from the original on 1 ಅಕ್ಟೋಬರ್ 2020. Retrieved 15 December 2017.