ಫಿಲಿಪ್ಸ್
ಸಂಸ್ಥೆಯ ಪ್ರಕಾರ | ನಾಮ್ಲೂಜ಼ ವೆನೂಟ್ಸ್ಚಾಪ್ (Euronext: PHIA, NYSE: PHG) |
---|---|
ಸ್ಥಾಪನೆ | 1891, ಏಯಿಂಟ್‍ಹೋವನ್ |
ಮುಖ್ಯ ಕಾರ್ಯಾಲಯ | ಆಮ್ಸ್ಟರ್ಡ್ಯಾಮ್, ನೆದರ್ಲೆಂಡ್ಸ್ |
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ಫ಼್ರ್ಯಾನ್ಸ್ ವ್ಯಾನ್ ಹೌಟನ್ (ಸಿಇಒ), ಜೆರೋಯಿನ್ ವ್ಯಾನ್ ಡರ್ ವೀರ್ (ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷ) |
ಉದ್ಯಮ | ವಿದ್ಯುನ್ಮಾನ |
ಉತ್ಪನ್ನ | ಗ್ರಾಹಕ ವಿದ್ಯುನ್ಮಾನ, ಗೃಹೋಪಯೋಗಿ ಉಪಕರಣಗಳು, ದೀಪ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆಗಳು, ವೈದ್ಯಕೀಯ ತಂತ್ರಜ್ಞಾನ |
ಆದಾಯ | €23.19 billion (2009)[೧] |
ಆದಾಯ(ಕರ/ತೆರಿಗೆಗೆ ಮುನ್ನ) | €614 million (2009)[೧] |
ನಿವ್ವಳ ಆದಾಯ | €410 million (2009)[೧] |
ಒಟ್ಟು ಆಸ್ತಿ | €30.53 billion (2009)[೧] |
ಒಟ್ಟು ಪಾಲು ಬಂಡವಾಳ | €14.60 billion (2009)[೧] |
ಉದ್ಯೋಗಿಗಳು | 115,924 (FTE, 2009)[೧] |
ಜಾಲತಾಣ | www.philips.com |
ಕೋನಿಂಕ್ಲಿಜ್ಕೆ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ N.V. (ರಾಯಲ್ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ ಇಂಕ್. ),ಬಹುಮಟ್ಟಿಗೆ ಸಾಮಾನ್ಯವಾಗಿ ಫಿಲಿಪ್ಸ್ ಎಂದೇ ಹೆಸರಾಗಿದೆ, (Euronext: PHIA, NYSE: PHG) ಇದು ಬಹುರಾಷ್ಟ್ರೀಯ ಡಚ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯಾಗಿದೆ.
ಫಿಲಿಪ್ಸ್ ವಿಶ್ವದಲ್ಲೇ ಅತೀ ದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಗಳಲ್ಲಿ ಒಂದಾಗಿದೆ. 2009ರಲ್ಲಿ ಅದರ ಮಾರಾಟವು €23.18 ಶತಕೋಟಿ. ಕಂಪನಿಯು 60ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ 115 ,924 ಜನರಿಗೆ ಉದ್ಯೋಗ ಕಲ್ಪಿಸಿದೆ.[೧]
ಅನೇಕ ಕ್ಷೇತ್ರಗಳಲ್ಲಿ ಫಿಲಿಪ್ಸ್ ಸಂಘಟಿತವಾಗಿದೆ: ಫಿಲಿಪ್ಸ್ ಕನ್ಸ್ಯೂಮರ್ ಲೈಫ್‌ಸ್ಟೈಲ್ಸ್ (ಮುಂಚಿನ ಫಿಲಿಪ್ಸ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಮತ್ತು ಡೊಮೆಸ್ಟಿಕ್ ಅಪ್ಲೈಯೆನ್ಸಸ್ ಮತ್ತು ಪರ್ಸೊನಲ್ ಕೇರ್), ಫಿಲಿಪ್ಸ್ ಲೈಟಿಂಗ್ ಮತ್ತು ಫಿಲಿಪ್ಸ್ ಹೆಲ್ತ್‌ಕೇರ್ (ಮುಂಚಿನ ಫಿಲಿಪ್ಸ್ ಮೆಡಿಕಲ್ ಸಿಸ್ಟಮ್ಸ್).
ಇತಿಹಾಸ
[ಬದಲಾಯಿಸಿ]ಕಂಪನಿಯನ್ನು 1891 ರಲ್ಲಿ ಗೆರಾರ್ಡ್ ಫಿಲಿಪ್ಸ್‌ಸ್ಥಾಪಿಸಿದರು. ಇವರು ನೆದರ್‌ಲ್ಯಾಂಡ್ಸ್‌ನ ಎಂಡ್‌ಹೋವನ್‌ನಲ್ಲಿ ಕಾರ್ಲ್ ಮಾರ್ಕ್ಸ್ ರ ತಾಯಿಕಡೆಯ ಸೋದರಸಂಬಂಧಿ. ಇದರ ಪ್ರಥಮ ಉತ್ಪನ್ನಗಳು ಬೆಳಕಿನ ಬಲ್ಬ್‌ಗಳು ಮತ್ತು ಇತರೆ ವಿದ್ಯುನ್ಮಾನ-ತಾಂತ್ರಿಕ ಉಪಕರಣವಾಗಿದೆ. ಇದರ ಪ್ರಥಮ ಕಾರ್ಖಾನೆಯು ಬೆಳಕಿನ ಶಿಲ್ಪ(ಕಲಾಕೃತಿ)ಕ್ಕೆ ಮೀಸಲಾದ ವಸ್ತುಸಂಗ್ರಹಾಲಯವಾಗಿ ಉಳಿದುಕೊಂಡಿದೆ.[೨] 1920ರ ದಶಕದಲ್ಲಿ ಕಂಪನಿಯು ಇತರ ಉತ್ಪನ್ನಗಳ ತಯಾರಿಕೆಯನ್ನು ಆರಂಭಿಸಿತು. ಉದಾಹರಣೆಗೆ ನಿರ್ವಾತ ಟ್ಯೂಬುಗಳು(ವಿಶ್ವಾದ್ಯಂತ 'ವಾಲ್ವ್‌ಗಳು' ಎಂದು ಕೂಡ ಹೆಸರಾಗಿದೆ). 1927ರಲ್ಲಿ ಅದು ಬ್ರಿಟಿಷ್ ವಿದ್ಯುನ್ಮಾನ ವಾಲ್ವ್ ಉತ್ಪಾದಕ ಕಂಪನಿ ಮುಲ್ಲಾರ್ಡ್ ಮತ್ತು 1932ರಲ್ಲಿ ಜರ್ಮನ್ ಟ್ಯೂಬ್ ಉತ್ಪಾದಕ ಕಂಪನಿ ವಾಲ್ವೊವನ್ನು ಸ್ವಾಧೀನಕ್ಕೆ ತೆಗೆದುಕೊಂಡಿತು. ಇವೆರಡೂ ಅಂಗಸಂಸ್ಥೆಗಳಾಯಿತು. 1939ರಲ್ಲಿ ಅವರು ವಿದ್ಯುತ್ ರೇಜರ್ ಫಿಲಿಶೇವ್ ( ನೊರೆಲ್ಕೊ ಬ್ರಾಂಡ್ ಹೆಸರು ಬಳಸಿಕೊಂಡು USA ನಲ್ಲಿ ಮಾರಾಟವಾಯಿತು) ಪರಿಚಯಿಸಿತು.
ಸ್ಟರ್ಲಿಂಗ್ ಎಂಜಿನ್ ಪುನಶ್ಚೇತನಕ್ಕೆ ಕೂಡ ಫಿಲಿಪ್ಸ್ ಕಾರಣಕರ್ತವಾಗಿದೆ.
ಫಿಲಿಪ್ಸ್ ರೇಡಿಯೊ
[ಬದಲಾಯಿಸಿ]1927 ಮಾರ್ಚ್ 11ರಂದು ಫಿಲಿಪ್ಸ್ ಎರಡು ಕಿರುತರಂಗದ ರೇಡಿಯೊ ಕೇಂದ್ರಗಳೊಂದಿಗೆ ಪ್ರಸಾರ ಕೈಗೊಂಡಿತು. PHOHI ಡಚ್ ಈಸ್ಟ್ಇಂಡೀಸ್‌ಗೆ (ಈಗ ಇಂಡೊನೇಶಿಯ)ಡಚ್ ಭಾಷೆಯಲ್ಲಿ ಪ್ರಸಾರ ಕೈಗೊಂಡಿತು ಮತ್ತು PCJJ (ನಂತರ PCJ) ಜಗತ್ತಿನ ಉಳಿದೆಡೆ ಇಂಗ್ಲೀಷ್, ಸ್ಪೇನ್ ಮತ್ತು ಜರ್ಮನ್‌ನಲ್ಲಿ ಪ್ರಸಾರ ಮಾಡಿತು.
ಭಾನುವಾರಗಳಂದು ಪ್ರಸಾರವಾಗುವ ಅಂತಾರಾಷ್ಟ್ರೀಯ ಕಾರ್ಯಕ್ರಮವು 1928ರಲ್ಲಿ ಆರಂಭವಾಯಿತು. ಆಯೋಜಕ ಎಡ್ಡಿ ಸ್ಟಾರ್ಟ್ಜ್ ಹ್ಯಾಪಿ ಸ್ಟೇಷನ್ ಕಾರ್ಯಕ್ರಮ ಆಯೋಜಿಸಿದರು. ಇದು ವಿಶ್ವದ ಅತೀ ದೀರ್ಘಕಾಲದ ಕಿರುತರಂಗದ ಕಾರ್ಯಕ್ರಮವಾಗಿದೆ.
ನೆದರ್‌ಲ್ಯಾಂಡ್ ಪ್ರಸಾರಗಳಿಗೆ 1940 ರ ಮೇನಲ್ಲಿ ಜರ್ಮನ್ ಆಕ್ರಮಣದಿಂದ ಅಡ್ಡಿಯಾಯಿತು. ಹುಯಿಜೆನ್‌ನಲ್ಲಿ ಪ್ರಸಾರಕರನ್ನು ಜರ್ಮನರು ಅಪಹರಿಸಿ, ನಾಜಿ ಪರ ಪ್ರಸಾರಗಳಿಗೆ ಬಳಸಿಕೊಂಡರು. ಕೆಲವರು ಜರ್ಮನಿಯ ಮೂಲವಾಗಿದ್ದರು. ಉಳಿದ ಗೋಷ್ಠಿಗಳಿಗೆ ಜರ್ಮನ್ ನಿಯಂತ್ರಣದಲ್ಲಿ ಡಚ್ ಪ್ರಸಾರಕರಿದ್ದರು.
ಫಿಲಿಪ್ಸ್ ರೇಡಿಯೊ ವಿಮೋಚನೆಯ ನಂತರ ಆರಂಭವಾಗಲಿಲ್ಲ. ಬದಲಿಗೆ ಎರಡು ಕಿರುತರಂಗದ ಕೇಂದ್ರಗಳು ರಾಷ್ಟ್ರೀಕರಣಗೊಂಡಿತು ಮತ್ತು 1946ರಲ್ಲಿ ಡಚ್ ಇಂಟರ್‌ನ್ಯಾಶನಲ್ ಸರ್ವೀಸ್ ರೇಡಿಯೊ ನೆದರ್‌ಲ್ಯಾಂಡ್ಸ್ ವರ್ಲ್ಡ್‌ವೈಡ್ ಎಂದು ಹೆಸರಾಯಿತು. ಆದರೂ ಹ್ಯಾಪಿ ಸ್ಟೇಷನ್ ಮುಂತಾದ PCJ ಕಾರ್ಯಕ್ರಮಗಳ ಪ್ರಸಾರ ಹೊಸ ಕೇಂದ್ರದಲ್ಲಿ ಮುಂದುವರಿಯಿತು.
2ನೇ ಜಾಗತಿಕ ಸಮರ
[ಬದಲಾಯಿಸಿ]1940, ಮೇ 9ರಂದು ಫಿಲಿಪ್ಸ್ ನಿರ್ದೇಶಕರಿಗೆ ನೆದರ್‌ಲ್ಯಾಂಡ್ ಮೇಲೆ ಜರ್ಮನರ ಆಕ್ರಮಣ ಮಾರನೆಯ ದಿನ ನಡೆಯುತ್ತದೆಂಬ ಬಗ್ಗೆ ಮಾಹಿತಿ ಸಿಕ್ಕಿತು. ಅವರು ದೇಶವನ್ನೇ ತೊರೆದು ಅಮೆರಿಕಕ್ಕೆ ಕಂಪನಿಯ ಬಂಡವಾಳದಲ್ಲಿ ದೊಡ್ಡ ಮೊತ್ತವನ್ನು ತೆಗೆದುಕೊಂಡು ಪಲಾಯನ ಮಾಡಲು ನಿರ್ಧರಿಸಿದರು. ನಾರ್ತ್ ಅಮೆರಿಕನ್ ಫಿಲಿಪ್ಸ್ ಕಂಪನಿ ಎಂಬ ಹೆಸರಿನಲ್ಲಿ USನಲ್ಲಿ ವ್ಯವಹರಿಸಿದ ಅವರು ಯುದ್ಧದ ಕಾಲದುದ್ದಕ್ಕೂ ಕಂಪೆನಿಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾದರು. ಇದೇ ಸಂದರ್ಭದಲ್ಲಿ, ಕಂಪನಿಯು ಜರ್ಮನರ ಕೈಗಳಿಂದ ನುಣುಚಿಕೊಳ್ಳಲು ನೆದರ್‌ಲ್ಯಾಂಡ್ಸ್ ಆಂಟಿಲೆಸ್‌ಗೆ ಸ್ವಯಂ ಸ್ಥಳಾಂತರಗೊಂಡಿತು.(ಕೇವಲ ಕಾಗದಪತ್ರದಲ್ಲಿ ಮಾತ್ರ)
ಫಿಲಿಪ್ಸ್ ಯುದ್ಧಕ್ಕೆ ಮುಂಚೆ ಮತ್ತು ಯುದ್ಧದ ನಂತರ ಜರ್ಮನ್ ಆಕ್ರಮಣ ಸೇನೆಗಳಿಗೆ ಅಪಾರ ಪ್ರಮಾಣದ ವಿದ್ಯುತ್ ಉಪಕರಣಗಳನ್ನು ಸರಬರಾಜು ಮಾಡಿತು ಎಂದು ನಂಬಲಾಗಿದೆ. ಇದರಿಂದಾಗಿ ಆ ದಿನದ ಅನೇಕ ಸಂಸ್ಥೆಗಳ ರೀತಿ ಕಂಪನಿಯೂ ನಾಜಿಗಳಿಗೆ ಸಹಕರಿಸಿತು ಎಂದು ಕೆಲವು ಜನರು ಭಾವಿಸಿದರು. ಆದಾಗ್ಯೂ,ಫಿಲಿಪ್ಸ್ ಸ್ವತಃ ಅಥವಾ ಅದರ ಆಡಳಿತಮಂಡಳಿ ನಾಜಿಗಳ ಬಗ್ಗೆ ಅಥವಾ ಅವರ ಸಿದ್ಧಾಂತಗಳ ಬಗ್ಗೆ ಸಹಾನುಭೂತಿ ಹೊಂದಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ. ದೇಶವನ್ನು ತ್ಯಜಿಸಿರದ ಫಿಲಿಪ್ಸ್ ಕುಟುಂಬದ ಏಕೈಕ ವ್ಯಕ್ತಿ ಫ್ರಿಟ್ಸ್ ಫಿಲಿಪ್ಸ್, ಫಿಲಿಪ್ಸ್‌ನಲ್ಲಿ ಉತ್ಪಾದನೆ ಪ್ರಕ್ರಿಯೆಗೆ ಅತ್ಯವಶ್ಯಕ ಎಂದು ನಾಜಿಗಳಿಗೆ ಸೂಚಿಸುವ ಮೂಲಕ 382 ಯಹೂದಿಗಳ ಜೀವ ರಕ್ಷಿಸಿದರು.[೩] ಇದಕ್ಕಾಗಿ ಅವರಿಗೆ 1995ರಲ್ಲಿ ಯಾಡ್ ವಾಶೆಮ್ ರೈಚಸ್ ಎಮಾಂಗ್ ದಿ ನೇಷನ್ಸ್ ಎಂಬ ಮನ್ನಣೆ ನೀಡಿ ಗೌರವಿಸಿತು.[೪]
ಜರ್ಮನರ ಆಕ್ರಮಣದ ಸಂದರ್ಭದಲ್ಲಿ ಫಿಲಿಪ್ಸ್ ಉತ್ಪಾದನೆ ಸೌಲಭ್ಯಗಳಲ್ಲಿ ದುರುಪಯೋಗ ಹಾಗು ಅವರ ನೌಕರರನ್ನು ಗುಲಾಮ ದುಡಿಮೆಗೆ ಬಲಾತ್ಕರಿಸಿದ ಜರ್ಮನರನ್ನು ತಡೆಯುವುದು ಫಿಲಿಪ್ಸ್‌ಗೆ ಸಾಧ್ಯವಾಗಲಿಲ್ಲ. ಡಚ್ ಕೈಗಾರಿಕೆ ಮೇಲಿನ ಗುರಿಯಲ್ಲಿ ಐಂಡ್‌ಹೋವನ್ ಉತ್ಪಾದನೆ ಸೌಲಭ್ಯ ಏಕಮಾತ್ರವಾಗಿದ್ದು, ಅದನ್ನು ಯುದ್ಧದ ಸಂದರ್ಭದಲ್ಲಿ ಮೈತ್ರಿಕೂಟದ ಪಡೆಗಳು ಉದ್ದೇಶಪೂರ್ವಕವಾಗಿ ಬಾಂಬ್ ದಾಳಿಗೆ ಗುರಿಪಡಿಸಿದವು.[ಸೂಕ್ತ ಉಲ್ಲೇಖನ ಬೇಕು]
ಯುದ್ಧದ ನಂತರದ ಶಕೆ
[ಬದಲಾಯಿಸಿ]ಯುದ್ಧದ ನಂತರ ಕಂಪನಿಯು ನೆದರ್‌ಲ್ಯಾಂಡ್ಸ್‌ಗೆ ಪುನಃ ಮರಳಿತು ಹಾಗು ಐಂಡ್ಹೋವನ್‌ನಲ್ಲಿ ಮುಖ್ಯ ಕಾರ್ಯಾಲಯವನ್ನು ಸ್ಥಾಪಿಸಿತು. ಅನೇಕ ರಹಸ್ಯ ಸಂಶೋಧನೆ ಸೌಲಭ್ಯಗಳಿಗೆ ಬೀಗಮುದ್ರೆ ಹಾಕಲಾಯಿತು ಹಾಗು ಆಕ್ರಮಣಕಾರರಿಂದ ಯಶಸ್ವಿಯಾಗಿ ಬಚ್ಚಿಡಲಾಯಿತು. ಇದರಿಂದಾಗಿ ಕಂಪನಿಯು ಯುದ್ಧದ ನಂತರ ತಕ್ಷಣವೇ ವೇಗವಾಗಿ ಉತ್ಪಾದನೆ ಆರಂಭಿಸಲು ಅವಕಾಶ ನೀಡಿತು.[ಸೂಕ್ತ ಉಲ್ಲೇಖನ ಬೇಕು]
1950ರಲ್ಲಿ, ಫಿಲಿಪ್ಸ್ ಕಂಪನಿಯು ಫಿಲಿಪ್ಸ್ ರೆಕಾರ್ಡ್ಸ್ ಸ್ಥಾಪಿಸಿತು.
ಫಿಲಿಪ್ಸ್ 1963ರಲ್ಲಿ ಆಡಿಯೊ ಕ್ಯಾಂಪ್ಯಾಕ್ಟ್ ಕ್ಯಾಸೆಟ್ ಸುರಳಿಯನ್ನು ಪರಿಚಯಿಸಿತು ಹಾಗು ಇದು ಪ್ರಚಂಡ ಯಶಸ್ಸನ್ನು ದಾಖಲಿಸಿತು. ಕಾಂಪ್ಯಾಕ್ಟ್ ಕ್ಯಾಸೆಟ್‌ಗಳನ್ನು ಆರಂಭದಲ್ಲಿ ಡಿಜಿಟಲ್ ಧ್ವನಿಮುದ್ರಿಸುವ ಯಂತ್ರಗಳಿಗಾಗಿ ಕಚೇರಿ ಬೆರಳಚ್ಚು ಶೀಘ್ರಲಿಪಿಕಾರರು ಮತ್ತು ವೃತ್ತಿಪರ ಪತ್ರಕರ್ತರು ಬಳಸಿದರು. ಅವುಗಳ ಧ್ವನಿಯ ಗುಣಮಟ್ಟ ಸುಧಾರಿಸುತ್ತಿದ್ದಂತೆ, ಕ್ಯಾಸೆಟ್ಟುಗಳನ್ನು ಧ್ವನಿ ಮುದ್ರಣಕ್ಕೆ ಬಳಸಲಾಯಿತು ಹಾಗು ವಿನೈಲ್ ರೆಕಾರ್ಡ್ಸ್ ಜತೆಯಲ್ಲಿ ಧ್ವನಿಮುದ್ರಿತ ಸಂಗೀತವನ್ನು ಮಾರಾಟ ಮಾಡುವ ಎರಡನೇ ಸಮೂಹ ಮಾಧ್ಯಮವೆನಿಸಿತು. ಫಿಲಿಪ್ಸ್ ಮೊದಲ ಸಂಯೋಜನೆ ಪೋರ್ಟಬಲ್ ರೇಡಿಯೊ ಮತ್ತು ಕ್ಯಾಸೆಟ್ ಧ್ವನಿಮುದ್ರಕವನ್ನು ಪರಿಚಯಿಸಿತು. ಅದು "ರೇಡಿಯೊ ಧ್ವನಿಮುದ್ರಕ"ವಾಗಿ ಮಾರಾಟವಾಯಿತು.ಇದು ಈಗ ಬೂಮ್ ಬಾಕ್ಸ್ ಎಂದು ಹೆಸರಾಗಿದೆ. ನಂತರ ಕ್ಯಾಸೆಟ್‌ನ್ನು ದೂರವಾಣಿ ಉತ್ತರಿಸುವ ಯಂತ್ರಗಳಲ್ಲಿ ಬಳಸಲಾಯಿತು. ಅವಿಚ್ಛಿನ್ನ ಲೂಪ್‌ನಲ್ಲಿ ಟೇಪನ್ನು ಸುತ್ತಿದ್ದ ವಿಶೇಷ ಸ್ವರೂಪದ ಕ್ಯಾಸೆಟ್ ಕೂಡ ಒಳಗೊಂಡಿದೆ. C-ಕ್ಯಾಸೆಟ್ 1970 ಮತ್ತು 1980ರ ದಶಕಗಳಲ್ಲಿ ಮುಂಚಿನ ವೈಯಕ್ತಿಕ ಕಂಪ್ಯೂಟರ್‌ಗಳಿಗೆ ಮೊದಲ ಸಮೂಹ ಸಂಗ್ರಹ ಉಪಕರಣವಾಯಿತು.
ಫಿಲಿಪ್ಸ್ ವೃತ್ತಿಪರ ಅಗತ್ಯಗಳಿಗಾಗಿ ಕ್ಯಾಸೆಟ್ ಗಾತ್ರವನ್ನು ತಗ್ಗಿಸಿತು. ಮೊದಲಿಗೆ, ಮಿನಿ ಕ್ಯಾಸೆಟ್ ನಂತರ ಮೈಕ್ರೋಕ್ಯಾಸೆಟ್ ಅವು ಪೂರ್ಣ ಡಿಜಿಟಲ್ ಧ್ವನಿಮುದ್ರಣ(ಡಿಕ್ಟೇಷನ್)ಯಂತ್ರಗಳು ಕಾಲಿಡುವ ತನಕ ಹೆಚ್ಚು ಬಳಕೆಯಾದ ಧ್ವನಿಮುದ್ರಣ ಯಂತ್ರಗಳಾಗಿವೆ. {{citation}}
: Empty citation (help)
1972ರಲ್ಲಿ ಫಿಲಿಪ್ಸ್ ವಿಶ್ವದ ಪ್ರಥಮ ಗೃಹ ವಿಡಿಯೊ ಕ್ಯಾಸೆಟ್ ಧ್ವನಿಮುದ್ರಿಕೆ N1500ಯನ್ನು ಆರಂಭಿಸಿತು. ಅದು 30 ನಿಮಿಷಗಳು ಅಥವಾ 45 ನಿಮಿಷಗಳು ಧ್ವನಿಮುದ್ರಣ ಮಾಡಬಹುದಾದ ದೊಡ್ಡ ವಿಡಿಯೊ ಕ್ಯಾಸೆಟ್‍ಗಳನ್ನು ಒಳಗೊಂಡಿದೆ. ನಂತರ ಒಂದು ಗಂಟೆಯ ಧ್ವನಿಸುರಳಿಗಳನ್ನು ಆರಂಭಿಸಿತು. ಸೋನಿಯ ಬೆಟಾಮ್ಯಾಕ್ಸ್ ಮತ್ತು VHSಸಮೂಹದ ಉತ್ಪಾದಕರಿಂದ ಪೈಪೋಟಿ ಎದುರಿಸಿದ್ದರಿಂದ ಫಿಲಿಪ್ಸ್ N1700 ಸಿಸ್ಟಮ್ ಪರಿಚಯಿಸಿತು. ಅದು ಎರಡು ಪಟ್ಟು ಉದ್ದದ ಧ್ವನಿಮುದ್ರಣಕ್ಕೆ ಅವಕಾಶ ನೀಡಿತು ಹಾಗು ಮೊದಲ ಬಾರಿಗೆ ಒಂದು ವಿಡಿಯೊ ಕ್ಯಾಸೆಟ್‌ನಲ್ಲಿ ಎರಡು ಗಂಟೆ ಅವಧಿಯ ಚಲನಚಿತ್ರಕ್ಕೆ ಹೊಂದಿಕೆಯಾಯಿತು. ಈ ವ್ಯವಸ್ಥೆಗಾಗಿ ಕಂಪನಿಯು ವಿಶೇಷ ಪ್ರಚಾರದ ಚಲನಚಿತ್ರವನ್ನು UK ಯಲ್ಲಿ ಬಿಡುಗಡೆ ಮಾಡಿತು. ಇದರಲ್ಲಿ ಹಾಸ್ಯನಟ ಡೆನಿಸ್ ನೋರ್ಡನ್ ಕಾಣಿಸಿಕೊಂಡರು.[೫] ಈ ಕಲ್ಪನೆಯನ್ನು ಜಪಾನಿನ ತಯಾರಕರು ಶೀಘ್ರದಲ್ಲೇ ನಕಲಿ ಮಾಡಿದರು ಹಾಗು ಅವರ ವಿಡಿಯೊ ಸುರುಳಿಗಳು ಅಗ್ಗದ ದರದ್ದಾಗಿತ್ತು. ಫಿಲಿಪ್ಸ್ ವಿಡಿಯೊ 2000 ವ್ಯವಸ್ಥೆಯೊಂದಿಗೆ ವಿಡಿಯೊ ರೆಕಾರ್ಡರ್‌ಗಳಿಗೆ ಹೊಸ ಪ್ರಮಾಣಕದತ್ತ ಒಂದು ಕೊನೆಯ ಪ್ರಯತ್ನ ಮಾಡಿತು. ಇದರಲ್ಲಿ ಎರಡೂ ಕಡೆಯೂ ಬಳಸಬಹುದಾದ ಸುರುಳಿಗಳಿದ್ದು, 8 ಗಂಟೆಗಳ ಒಟ್ಟು ಮುದ್ರಣ ಕಾಲವನ್ನು ಹೊಂದಿತ್ತು. ಫಿಲಿಪ್ಸ್ ಕೇವಲ PAL ಪ್ರಮಾಣಕ ಹಾಗೂ ಯುರೋಪ್‌ನಲ್ಲಿ ಮಾತ್ರ ತನ್ನ ವ್ಯವಸ್ಥೆಗಳನ್ನು ಮಾರಾಟ ಮಾಡಿತು. ಜಪಾನಿನ ತಯಾರಕರು ಜಾಗತಿಕವಾಗಿ ಮಾರಾಟಮಾಡಿದರು. ಜಪಾನಿಗರ ಮಾರಾಟದ ಪ್ರಮಾಣದ ಅನುಕೂಲಗಳು ಮೀರಿಸಲು ಅಸಾಧ್ಯವೆಂದು ಸಾಬೀತಾಯಿತು ಹಾಗು ಫಿಲಿಪ್ಸ್ V2000 ವ್ಯವಸ್ಥೆಯನ್ನು ಹಿಂತೆಗೆದುಕೊಂಡು VHS ಕೊಯಲಿಷನ್‌ಗೆ ಸೇರಿತು. {{citation}}
: Empty citation (help)
ಫಿಲಿಪ್ಸ್ ಚಲನಚಿತ್ರಗಳ ಮಾರಾಟಕ್ಕೆ ಲೇಸರ್ ಡಿಸ್ಕ್‌ನ್ನು ಪೂರ್ವದಲ್ಲೇ ಅಭಿವೃದ್ಧಿಪಡಿಸಿತು. ತನ್ನ ವಿಡಿಯೊ ರೆಕಾರ್ಡರ್ ಮಾರಾಟಗಳಲ್ಲಿ ಬೇಡಿಕೆ ಕುಸಿಯುವುದೆಂಬ ಭಯದಿಂದ ವಾಣಿಜ್ಯ ಬಿಡುಗಡೆಯನ್ನು ವಿಳಂಬಿಸಿತು. ನಂತರ ಫಿಲಿಪ್ಸ್ ಪ್ರಥಮ ವಾಣಿಜ್ಯಕ ಲೇಸರ್ ಡಿಸ್ಕ್ ಪ್ರಮಾಣಕ ಮತ್ತು ಪ್ಲೇಯರ್ಸ್‌ಗಳನ್ನು ಬಿಡುಗಡೆ ಮಾಡಲು MCA ಜತೆ ಸೇರಿಕೊಂಡಿತು. 1982ರಲ್ಲಿ, ಫಿಲಿಪ್ಸ್ ಕ್ಯಾಂಪ್ಯಾಕ್ಟ್ ಡಿಸ್ಕ್ ಬಿಡುಗಡೆಗೆ ಸೋನಿ ಜತೆಗೂಡಿತು. ಈ ವಿನ್ಯಾಸಗಳು ಪ್ರಸಕ್ತ ದಿನದ DVD ಮತ್ತು ಬ್ಲು-ರೇಯಾಗಿ ವಿಕಾಸಗೊಂಡಿತು. ಇದನ್ನು ಫಿಲಿಪ್ಸ್ ಸೋನಿ ಜತೆಯಲ್ಲಿ ಕ್ರಮವಾಗಿ 1997 {{citation}}
: Empty citation (help)ಮತ್ತು 2006ರಲ್ಲಿ ಬಿಡುಗಡೆ ಮಾಡಿತು.
ಇಸವಿ 1991ರಲ್ಲಿ ಕಂಪನಿಯ ಹೆಸರು N.V. ಫಿಲಿಪ್ಸ್ ಗ್ಲೋಯಿಲ್ಯಾಂಪೆನ್‌ಫ್ಯಾಬ್ರಿಕೆನ್‌ನಿಂದ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ N.V.ಗೆ ಬದಲಾಯಿತು. ಇದೇ ಸಮಯದಲ್ಲಿ, ಉತ್ತರ ಅಮೆರಿಕದ ಫಿಲಿಪ್ಸ್ ಕಂಪನಿ ಔಪಚಾರಿಕವಾಗಿ ವಿಸರ್ಜನೆಗೊಂಡಿತು ಹಾಗೂ ಹೊಸ ಕಾರ್ಪೊರೇಟ್ ವಿಭಾಗವು U.S.ನಲ್ಲಿ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ ನಾರ್ತ್ ಅಮೆರಿಕ ಕಾರ್ಪ್ ಎಂಬ ಹೆಸರಿನೊಂದಿಗೆ ರಚನೆಯಾಯಿತು. {{citation}}
: Empty citation (help)
1997ರಲ್ಲಿ ಪ್ರಧಾನ ಕಾರ್ಯಾಲಯವನ್ನು ಎಂಡನ್‌ಹೋವನ್‌ನಿಂದ ಆಮ್‌ಸ್ಟರ್‌ಡ್ಯಾಂಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಇದರ ಜತೆಗೆ ಕಾರ್ಪೊರೇಟ್ ಹೆಸರನ್ನು ಕೋನಿಂಕ್‌ಲಿಜ್ಕೆ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ N.Vಎಂದು ಬದಲಾಯಿತು. {{citation}}
: Empty citation (help) ಈ ಸ್ಥಳಾಂತರವು 2001ರಲ್ಲಿ ಮುಕ್ತಾಯವಾಯಿತು. ಆರಂಭದಲ್ಲಿ ಕಂಪೆನಿಯು ರೆಂಬ್ರಾಂಡ್ ಟವರ್‌ನಲ್ಲಿ ನೆಲೆಗೊಂಡಿತು. ಆದರೆ 2002ರಲ್ಲಿ ಅದು ಪುನಃ ಬ್ರೈಂಟರ್ ಟವರ್‌ಗೆ ಸ್ಥಳಾಂತರಗೊಂಡಿತು. ಒಂದು ಅರ್ಥದಲ್ಲಿ, ಆಮ್‌ಸ್ಟರ್‌ಡಾಂಗೆ ಕಂಪನಿಯ ಸ್ಥಳಾಂತರವು ಕಂಪನಿಯ ಮೂಲ ಸ್ಥಳಕ್ಕೆ ವಾಪಸಾತಿ ಎಂದು ಪರಿಗಣಿಸಲಾಯಿತು. ಏಕೆಂದರೆ ಬೆಳಕಿನ ವ್ಯವಸ್ಥೆಯ ಬಲ್ಬ್ ಕಾರ್ಖಾನೆ ಸ್ಥಾಪಿಸುವ ಕಲ್ಪನೆ ಗೆರಾರ್ಡ್ ಫಿಲಿಪ್ಸ್ ಅವರಿಗೆ ಹೊಳೆದಾಗ, ಅವರು ಆಮ್‌ಸ್ಟರ್‌ಡಾಂನಲ್ಲಿ ವಾಸವಿದ್ದರು. ಅವರು ಅಲ್ಲಿ ಬೆಳಕಿನ ಬಲ್ಬ್‌ಗಳ ಸಾಮೂಹಿಕ ಉತ್ಪಾದನೆ ಕ್ಷೇತ್ರದಲ್ಲಿ ತಮ್ಮ ಪ್ರಥಮ ಪ್ರಯೋಗಗಳನ್ನು ಜಾನ್ ರೀಸ್ಸೆ ಜತೆಗೂಡಿ ನಡೆಸಿದರು. ಫಿಲಿಪ್ಸ್ ಲೈಟಿಂಗ್, ಫಿಲಿಪ್ಸ್ ಸಂಶೋಧನೆ, ಫಿಲಿಪ್ಸ್ ಅರೆವಾಹಕಗಳು( 2006 ಸೆಪ್ಟೆಂಬರ್‌ನಲ್ಲಿ NXPಯಾಗಿ ಪ್ರತ್ಯೇಕವಾಯಿತು)ಹಾಗು ಫಿಲಿಪ್ಸ್ ಡಿಸೈನ್ ಇನ್ನೂ ಐಂಡ್‌ಹೋವನ್‌ನಲ್ಲಿ ನೆಲೆಗೊಂಡಿದೆ. ಫಿಲಿಪ್ಸ್ ಹೆಲ್ತ್‌ಕೇರ್ ನೆದರ್‌ಲ್ಯಾಂಡ್ಸ್‌ನ ಬೆಸ್ಟ್( ಐಂಡ್‌ಹೋವನ್ ಸ್ವಲ್ಪ ಹೊರಗೆ) ಮತ್ತು ಅಮೆರಿಕದ ಮಸಾಚುಸೆಟ್ಸ್‌ನ ಎಂಡೋವರ್ ಎರಡೂ ಕಡೆ(ಬೋಸ್ಟೋನ್ ಬಳಿ) ಪ್ರಧಾನ ಕಾರ್ಯಾಲಯಗಳನ್ನು ಹೊಂದಿದೆ.
2010ರಲ್ಲಿದ್ದಂತೆ ಮೂಲಭೂತ ಸಂಶೋಧನೆ ಮೂಲಕ ಗ್ರಾಹಕ ವಿದ್ಯುನ್ಮಾನದಲ್ಲಿ ಯಾವುದೇ ನಾವೀನ್ಯತೆಗೆ ಪ್ರಯತ್ನಿಸಲಿಲ್ಲ.[೬]
ಮುಖ್ಯ ಆವಿಷ್ಕಾರಗಳು
[ಬದಲಾಯಿಸಿ]ಕಾಂಪ್ಯಾಕ್ಟ್ ಕ್ಯಾಸೆಟ್
[ಬದಲಾಯಿಸಿ]1962ರಲ್ಲಿ ಫಿಲಿಪ್ಸ್ ಆಡಿಯೊ ಸಂಗ್ರಹಕ್ಕಾಗಿ ಕಾಂಪ್ಯಾಕ್ಟ್ ಆಡಿಯೊ(ಧ್ವನಿಮುದ್ರಿತ) ಕ್ಯಾಸೆಟ್ ಮಾಧ್ಯಮವನ್ನು ಆವಿಷ್ಕರಿಸಿತು. ಇತರೆ ಕಾಂತೀಯ ಸುರುಳಿ ಕರಡಿಗೆ ವ್ಯವಸ್ಥೆ(ಮ್ಯಾಗ್ನೆಟಿಕ್ ಟೇಪ್ ಕಾರ್ಟ್‌ರಿಡ್ಜ್ ಸಿಸ್ಟಮ್ಸ್) ಇದ್ದರೂ, ಕಾಂಪ್ಯಾಕ್ಟ್ ಕ್ಯಾಸೆಟ್ ವಿನ್ಯಾಸಕ್ಕೆ ಉಚಿತ ಪರವಾನಗಿ ನೀಡುವ ನಿರ್ಧಾರದ ಫಲವಾಗಿ ಕಾಂಪ್ಯಾಕ್ಟ್ ಕ್ಯಾಸೆಟ್ ಮೇಲುಗೈ ಪಡೆಯಿತು.
ಲೇಸರ್‌ಡಿಸ್ಕ್
[ಬದಲಾಯಿಸಿ]ಲೇಸರ್‌ಡಿಸ್ಕ್ 30 ಸೆಮಿ ತಟ್ಟೆಯಾಗಿದ್ದು, MCAಜತೆ ವಿನ್ಯಾಸಗೊಳಿಸಲಾಗಿದೆ ಹಾಗೂ VHS ಜತೆ ಪೈಪೋಟಿಗಿಳಿಯುವ ಹಾಗೂ ಅದನ್ನು ಬದಲಿಸುವ ಉದ್ದೇಶವನ್ನು ಹೊಂದಿತ್ತು. ಇದು VHSನಷ್ಟು ಜನಪ್ರಿಯವಾಗಲಿಲ್ಲ, ಏಕೆಂದರೆ, ಪ್ಲೇಯರ್‌ಗಳ ಆರಂಭಿಕ ಬಂಡವಾಳ ವೆಚ್ಚಗಳು, ಚಲನಚಿತ್ರ ಟೈಟಲ್‌ಗಳ ಹೆಚ್ಚಿನ ವೆಚ್ಚಗಳು ಮತ್ತು ಓದಲು ಮಾತ್ರ ಸಾಧ್ಯವಾಗುವ ವಿನ್ಯಾಸ. ಆದರೆ ಬೆಟಾಮ್ಯಾಕ್ಸ್ ರೀತಿಯಲ್ಲಿ,ಇದು ಗಂಭೀರ ವಿಡಿಯೊ ಸಂಗ್ರಾಹಕರ ನಡುವೆ ವ್ಯಾಪಕ ಯಶಸ್ಸನ್ನು ಅನುಭವಿಸಿತು. ಲೇಸರ್‌ಡಿಸ್ಕ್‌ಗೆ ಸೃಷ್ಟಿಸಿದ ತಂತ್ರಜ್ಞಾನಗಳನ್ನು ಪುನಃ ಕಾಂಪ್ಯಾಕ್ಟ್ ಡಿಸ್ಕ್‌ಗೆ ಬಳಸಬಹುದು.
ಕಾಂಪ್ಯಾಕ್ಟ್ ಡಿಸ್ಕ್
[ಬದಲಾಯಿಸಿ]ಫಿಲಿಪ್ಸ್ ಮತ್ತು MCAಲೇಸರ್ ಡಿಸ್ಕ್ ಯೋಜನೆ VHS ಸಮೂಹ ಮಾರುಕಟ್ಟೆ ಮಟ್ಟವನ್ನು ಮುಟ್ಟದಿದ್ದರೂ, ಫಿಲಿಪ್ಸ್ ಈ ವಿನ್ಯಾಸವು ಯಶಸ್ವಿಯಾಗುತ್ತದೆಂದು ಭರವಸೆ ತಾಳಿದರು ಹಾಗು(ಸೋನಿ ನೆರವಿನೊಂದಿಗೆ)1982ರಲ್ಲಿ ಸಣ್ಣ CDಯನ್ನು ಆರಂಭಿಸಿದರು.
DVD
[ಬದಲಾಯಿಸಿ]CDಯ ತರುವಾಯದ ಉತ್ತರಾಧಿಕಾರ ವಹಿಸಿದ DVD,ಅನೇಕ ಹಿನ್ನಡೆಗಳನ್ನು ಅನುಭವಿಸಿತು. ಫಿಲಿಪ್ಸ್ CDಯನ್ನು ಮಲ್ಟಿಮೀಡಿಯ ಕಾಂಪ್ಯಾಕ್ಟ್ ಡಿಸ್ಕ್ (MMCD) ಎಂದು ಹೆಸರಾದ ಹೊಸ ವಿನ್ಯಾಸದಲ್ಲಿ ಮುಂದುವರಿಸಲು ಬಯಸಿತು. ಇನ್ನೊಂದು ಸಮೂಹ(ತೋಷಿಬಾ ನೇತೃತ್ವದಲ್ಲಿ) ಸ್ಪರ್ಧಾತ್ಮಕ ವಿನ್ಯಾಸವನ್ನು ಅಭಿವೃದ್ಧಿಪಡಿಸಿತು. ನಂತರ ಅದು ಸೂಪರ್ ಡೆನ್ಸಿಟಿ (SD) ಡಿಸ್ಕ್ ಎಂದು ಹೆಸರು ಪಡೆಯಿತು. ಅದರ ಪ್ರತಿನಿಧಿಗಳು ಕಡತ ವ್ಯವಸ್ಥೆ ಕುರಿತು ಸಲಹೆ ಪಡೆಯಲು IBMಸಂಪರ್ಕಿಸಿದರು.
IBM ಫಿಲಿಪ್ಸ್' ಮತ್ತು ಸೋನಿಯ ಉಪಕ್ರಮಗಳ ಬಗ್ಗೆ ತಿಳಿದುಕೊಂಡಿತು. IBM ಕಂಪ್ಯೂಟರ್ ಕೈಗಾರಿಕೆ ತಜ್ಞರಿಗೆ(ಅವರ ನಡುವೆ ಆಪಲ್, ಡೆಲ್ ಇತ್ಯಾದಿ)ಕಾರ್ಯ ತಂಡವನ್ನು ರಚಿಸುವಂತೆ ಮನದಟ್ಟು ಮಾಡಿತು. ಟೆಕ್ನಿಕಲ್ ವರ್ಕಿಂಗ್ ಗ್ರೂಪ್(TWG) ಎರಡೂ ವಿನ್ಯಾಸಗಳ ವಿನ್ಯಾಸ ಕದನ ( ವಿಡಿಯೊಟೇಪ್ ವಿನ್ಯಾಸ ಕದನದ ರೀತಿಯಲ್ಲಿ) ತಪ್ಪಿಸುವುದಕ್ಕಾಗಿ ವಿಲೀನಗೊಳ್ಳದಿದ್ದರೆ ಎರಡೂ ವಿನ್ಯಾಸಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿತು. ಇದರ ಫಲವಾಗಿ DVD ನಿರ್ದಿಷ್ಟ ವಿವರಣೆ 1995ರಲ್ಲಿ ಅಂತಿಮಗೊಂಡಿತು. DVD ವಿಡಿಯೊ ವಿನ್ಯಾಸವನ್ನು 1996ರಲ್ಲಿ ಮೊದಲಿಗೆ ಜಪಾನ್‌ನಲ್ಲಿ ಪರಿಚಯಿಸಲಾಯಿತು. ನಂತರ 1997ರಲ್ಲಿ U.S.ನಲ್ಲಿ ಸೀಮಿತ ಪ್ರಯೋಗವಾಗಿ, ನಂತರ 1998ರ ಅಂತ್ಯದಿಂದ ಯುರೋಪ್‌ನಾದ್ಯಂತ ಹಾಗೂ ಇತರ ಖಂಡಗಳಲ್ಲಿ ಪರಿಚಯಿಸಲಾಯಿತು.
ಬ್ಲ್ಯೂ-ರೇ
[ಬದಲಾಯಿಸಿ]ಫಿಲಿಪ್ಸ್ ಮತ್ತು ಸೋನಿಯಿಂದ ಮುಖ್ಯವಾಗಿ ಅಭಿವೃದ್ಧಿಯಾದ ಬ್ಲೂ-ರೇ ನೀಲಿ-ನೇರಳೆ ಬಣ್ಣದ ಡಯೋಡ್‌ಗಳನ್ನು ಬಳಸಿಕೊಂಡು, CD ಅಥವಾ DVDಗಿಂತ ಕಡಿಮೆ ತರಂಗಾಂತರದ ಕಿರಣವನ್ನು ಸೃಷ್ಟಿಸುತ್ತದೆ.ಈ ಕಾರಣದಿಂದ 25 GBಏಕ-ಪದರ ಅಥವಾ 50 GB ದ್ವಿಪದರಗಳಿಂದ CD ಅಥವಾ DVDಗಿಂತ ಸಾಮರ್ಥ್ಯವು ಹೆಚ್ಚಿಗಿರುತ್ತದೆ.
ಅರೆವಾಹಕಗಳ ಮಾರಾಟ
[ಬದಲಾಯಿಸಿ]This section has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
ಚಿಪ್ ತಯಾರಕರಾಗಿ ಫಿಲಿಪ್ಸ್ ಅರೆವಾಹಕಗಳು ವಿಶ್ವವ್ಯಾಪಿ ಅಗ್ರ 20 ಅರೆವಾಹಕ ಮಾರಾಟ ಪ್ರಮುಖರಲ್ಲಿ ಒಂದಾಗಿತ್ತು.
2005 ಡಿಸೆಂಬರ್‌ನಲ್ಲಿ ಫಿಲಿಪ್ಸ್ ಅರೆವಾಹಕ ವಿಭಾಗವನ್ನು ಪ್ರತ್ಯೇಕ ಕಾನೂನು ಅಸ್ತಿತ್ವವಾಗಿ ರೂಪಿಸುವ ಇಚ್ಛೆಯನ್ನು ಪ್ರಕಟಿಸಿತು. "ತೊಡಕು ಬಿಡಿಸುವ" ಈ ಪ್ರಕ್ರಿಯೆಯು 2006 ಅಕ್ಟೋಬರ್ 1ರಂದು ಮುಕ್ತಾಯವಾಯಿತು.
2006ರ ಆಗಸ್ಟ್ 2ರಂದು ಫಿಲಿಪ್ಸ್ ಅರೆವಾಹಕಗಳ 80.1% ಷೇರುಗಳನ್ನು ಕಾಲ್‌ಬರ್ಗ್ ಕ್ರಾವಿಸ್ ರಾಬರ್ಟ್ಸ್ & Co(KKR ), ಸಿಲ್ವರ್ ಲೇಕ್ ಪಾರ್ಟ್‌ನರ್ಸ್ ಮತ್ತು ಆಲ್ಪ್‌ಇನ್‌ವೆಸ್ಟ್ ಪಾರ್ಟ್‌ನರ್ಸ್ ಅವರನ್ನು ಒಳಗೊಂಡ ಖಾಸಗಿ ಈಕ್ವಿಟಿ ಬಂಡವಾಳದಾರರಿಗೆ ಮಾರಾಟ ಮಾಡುವ ಒಪ್ಪಂದವನ್ನು ಪೂರ್ಣಗೊಳಿಸಿತು. ಮಾರಾಟವು 2005 ಡಿಸೆಂಬರ್‌ನಲ್ಲಿ ಆರಂಭವಾದ ಪ್ರಕ್ರಿಯೆಯನ್ನು ಮುಗಿಸಿತು ಹಾಗು ಅರೆವಾಹಕಗಳಿಗೆ ಪ್ರತ್ಯೇಕ ಕಾನೂನು ಅಸ್ತಿತ್ವವನ್ನು ಸೃಷ್ಟಿಸಲು ಹಾಗೂ ಎಲ್ಲ ಕಾರ್ಯವಿಧಾನದ ಆಯ್ಕೆಗಳನ್ನು ಹುಡುಕಲು ನಿರ್ಧರಿಸಿತು. 6 ವಾರಗಳಿಗೆ ಮುಂಚೆ ಆನ್‌ಲೈನ್ ಮಾತುಕತೆಗೆ ಮುನ್ನ, 8000 ಫಿಲಿಪ್ಸ್ ವ್ಯವಸ್ಥಾಪಕರಿಗೆ ಪತ್ರದ ಮೂಲಕ, ಅರೆವಾಹಕಗಳ ಪರಿವರ್ತನೆಯನ್ನು ಸ್ವತಂತ್ರ ಸಂಸ್ಥೆಯಾಗಿ ಶೀಘ್ರಗತಿಯಲ್ಲಿ ನಡೆಸುವುದಾಗಿ ಪ್ರಕಟಿಸಲಾಯಿತು. ಬಹುತೇಕ ಮಾಲೀಕತ್ವವನ್ನು ಮೂರನೇ ಪಕ್ಷ ತೆಗೆದುಕೊಂಡಿತು.
ಇದು ವಹಿವಾಟಿಗಿಂತ ಹೆಚ್ಚು ಮಹತ್ವ ಪಡೆದಿದೆ. ಇದು ಫಿಲಿಪ್ಸ್ ಬದಲಾವಣೆಯ ಸುದೀರ್ಘ ಪ್ರವಾಸದಲ್ಲಿ ಬಹುಶಃ ಅತ್ಯಂತ ಗಮನಾರ್ಹ ಮೈಲಿಗಲ್ಲಾಗಿದೆ ಹಾಗೂ ವಿಶೇಷವಾಗಿ ಅರೆವಾಹಕಗಳನ್ನು ಒಳಗೊಂಡವರು ಸೇರಿದಂತೆ
ಪ್ರತಿಯೊಬ್ಬರಿಗೂ ಹೊಸ ಅಧ್ಯಾಯವಾಗಿದೆ".
115ಕ್ಕಿಂತ ಹೆಚ್ಚು ವರ್ಷಗಳ ಇತಿಹಾಸದಲ್ಲಿ, ಇದು ದೊಡ್ಡ ಹೆಜ್ಜೆಯಾಗಿ ಪರಿಗಣಿಸಲಾಗಿದ್ದು, ಖಂಡಿತವಾಗಿ ಕಂಪನಿಯ ಚಿತ್ರಣವನ್ನು ಬದಲಿಸುತ್ತದೆ. ವಿದ್ಯುತ್ ಜಗತ್ತಿನಿಂದ ವಿದ್ಯುನ್ಮಾನ ಯುಗಕ್ಕೆ ಯಶಸ್ವಿಯಾಗಿ ಪರಿವರ್ತನೆ ಹೊಂದಿದ ಕೆಲವೇ ಕಂಪನಿಗಳಲ್ಲಿ ಫಿಲಿಪ್ಸ್ ಕೂಡ ಒಂದಾಗಿದೆ. 1953ರಲ್ಲಿ ಅದರ ಅರೆವಾಹಕ ಚಟುವಟಿಕೆಗಳನ್ನು ಆರಂಭಿಸಿ, ಅದನ್ನು ಜಾಗತಿಕ ಅಗ್ರ 10 ಉದ್ಯಮಗಳಲ್ಲಿ ಒಂದಾಗಿ ನಿರ್ಮಿಸಿದೆ. ಕಳೆದ 50 ವರ್ಷಗಳಲ್ಲಿ, ಅರೆವಾಹಕಗಳು ಫಿಲಿಪ್ಸ್‌ನ ಅನೇಕ ನಾವೀನ್ಯಗಳ ಹೃದಯಭಾಗವಾಗಿದೆ.
ಅರೆವಾಹಕ ವಿಭಾಗವನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಅಂತಿಮವಾಗಿ ದಾರಿಕಲ್ಪಿಸಿದ ಪ್ರಕ್ರಿಯೆಗೆ ಒಪ್ಪಿಕೊಳ್ಳುವ ಮೂಲಕ ಆಡಳಿತ ಮಂಡಳಿಯು ಎಂದಿಗೂ ತೆಗೆದುಕೊಂಡಿರದ ಕಠಿಣ ನಿರ್ಧಾರವನ್ನು ಕೈಗೊಂಡಿತು.
2006ರ ಆಗಸ್ಟ್ 21ರಂದು ಬೈನ್ ಕ್ಯಾಪಿಟಲ್ ಮತ್ತು ಅಪಾಕ್ಸ್ ಪಾರ್ಟ್‌ನರ್ಸ್ KKRನೇತೃತ್ವದ ವಿಸ್ತರಿತ ಒಕ್ಕೂಟಕ್ಕೆ ಸೇರುವ ಬದ್ಧತೆಗಳಿಗೆ ಸಹಿ ಹಾಕಿರುವುದಾಗಿ ಪ್ರಕಟಿಸಿತು. ಅದು ಅರೆವಾಹಕ ಡಿವಿಷನ್‌ನಲ್ಲಿ ನಿಯಂತ್ರಣ ಷೇರುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿತ್ತು.
2006ರ ಸೆಪ್ಟೆಂಬರ್ 1ರಂದು ಫಿಲಿಪ್ಸ್ ಸ್ಥಾಪಿಸಿದ ಹೊಸ ಅರೆವಾಹಕ ಕಂಪನಿಯ ಹೆಸರು NXP ಸೆಮಿಕಂಡಕ್ಟರ್ಸ್ಎಂದು ಬರ್ಲಿನ್‍ನಲ್ಲಿ ಪ್ರಕಟಿಸಲಾಯಿತು.
ಅರೆವಾಹಕ ಡಿವಿಷನ್ ಮಾರಾಟದ ಜತೆ ಹೊಂದಿಕೆಯಾಗುವಂತೆ, ಫಿಲಿಪ್ಸ್ ಕಂಪನಿ ಹೆಸರಿನಿಂದ 'ಎಲೆಕ್ಟ್ರಾನಿಕ್ಸ್' ಪದವನ್ನು ಕೈಬಿಡುವುದಾಗಿ ಪ್ರಕಟಿಸಿತು. ಹೀಗೆ,ಕೋನಿಂಕ್‌ಲಿಜ್ಕೆ ಫಿಲಿಪ್ಸ್ N.V. ಎಂದು ಹೆಸರಾಯಿತು (ರಾಯಲ್ ಫಿಲಿಪ್ಸ್ N.V.).
ಕಾರ್ಪೋರೇಟ್ ವ್ಯವಹಾರಗಳು
[ಬದಲಾಯಿಸಿ]2004ರಲ್ಲಿ,, ಫಿಲಿಪ್ಸ್ ತನ್ನ "ಲೆಟಸ್ ಮೇಕ್ ಥಿಂಗ್ಸ್ ಬೆಟರ್" ಘೋಷಣೆಯನ್ನು ಕೈಬಿಟ್ಟು, "ಸೆನ್ಸ್ ಎಂಡು ಸಿಂಪ್ಲಿಸಿಟಿ" ಘೋಷಣೆಗೆ ಒಲವು ವ್ಯಕ್ತಪಡಿಸಿತು.
ASM ಲಿಥೋಗ್ರಫಿ ಫಿಲಿಪ್ಸ್ ವಿಭಾಗದಿಂದ ಸ್ವತಂತ್ರಗೊಂಡ ಸಂಸ್ಥೆಯಾಗಿದೆ.
ಆಟೊಸ್ ಒರಿಜಿನ್ ಭಾಗವಾಗಿರುವ ಒರಿಜಿನ್ ಫಿಲಿಪ್ಸ್‌ನ ಮುಂಚಿನ ವಿಭಾಗವಾಗಿದೆ.
ಇದರ ರೆಕಾರ್ಡ್ ವಿಭಾಗ , ಪಾಲಿಗ್ರಾಮ್ ಅನ್ನು ಸೀಗ್ರಾಂಗೆ 1998ರಲ್ಲಿ ಮಾರಾಟ ಮಾಡಿ ಯೂನಿವರ್ಸಲ್ ಮ್ಯೂಸಿಕ್ ಗ್ರೂಪ್
ರಚಿಸಲಾಯಿತು.
ಫಿಲಿಪ್ಸ್ ಇಂಟಲೆಕ್ಚ್ಯುಯಲ್ ಪ್ರಾಪರ್ಟಿ ಮತ್ತು ಸ್ಟಾಂಡರ್ಡ್ಸ್ [೭] ಕಂಪನಿಯ ವಿಭಾಗವಾಗಿದ್ದು, ಪರವಾನಗಿ,ವ್ಯಾಪಾರಿಮುದ್ರೆಯ ರಕ್ಷಣೆ ಮತ್ತು ಸ್ವಾಮ್ಯ ಹಕ್ಕು ಪಡೆಯುವ ಬಗ್ಗೆ ವ್ಯವಹರಿಸುತ್ತದೆ. ಫಿಲಿಪ್ಸ್ ಪ್ರಸ್ತುತ 55 ೦೦೦ ಸ್ವಾಮ್ಯಹಕ್ಕುಗಳನ್ನು,33 ೦೦೦ ವ್ಯಾಪಾರಿ ಮುದ್ರೆ ನೋಂದಣಿಗಳನ್ನು ಮತ್ತು 49 ,೦೦೦ ವಿನ್ಯಾಸ ನೋಂದಣಿಗಳನ್ನು ಹೊಂದಿದೆ.
CEOs
[ಬದಲಾಯಿಸಿ]ಹಿಂದಿನ ಮತ್ತು ಇಂದಿನCEOs:
- 1891–1922: ಗೆರಾರ್ಡ್ ಫಿಲಿಪ್ಸ್
- 1922–1939: ಆಂಟನ್ ಫಿಲಿಪ್ಸ್
- 1939–1961: ಫ್ರಾನ್ಸ್ ಆಟ್ಟನ್
- 1961–1971: ಫ್ರಿಟ್ಸ್ ಫಿಲಿಪ್ಸ್
- 1971–1977: ಹೆಂಕ್ ವ್ಯಾನ್ ರೈಮ್ಸ್‌ಡಿಜ್ಕ್
- 1977–1981: ನೈಕೊ ರೋಡೆನ್‌ಬರ್ಗ್
- 1982–1986: ವಿಸ್ಸೆ ಡೆಕರ್
- 1986–1990: ಕಾರ್ನೆಲಿಸ್ ವ್ಯಾಂಡರ್ ಕ್ಲಗ್
- 1990–1996: ಜ್ಯಾನ್ ಟಿಮ್ಮರ್
- 1996–2001: ಕಾರ್ ಬೂನ್‌ಸ್ಟ್ರಾ
- 2001–ಇಂದಿನವರೆಗೆ: ಗೆರಾರ್ಡ್ ಕ್ಲೈಸ್ಟರ್‌ಲೀ
ಸ್ವಾಧೀನಗಳು,ಉಪಸಂಸ್ಥೆಗಳು ಮತ್ತು ಸ್ಪಿನ್‌ಔಟ್ಸ್
[ಬದಲಾಯಿಸಿ]ಸ್ವಾಧೀನಕಾರ್ಯಗಳು
[ಬದಲಾಯಿಸಿ]ವರ್ಷಗಳವರೆಗೆ ಫಿಲಿಪ್ಸ್ ಸ್ವಾಧೀನಪಡಿಸಿಕೊಂಡ ಕಂಪನಿಗಳಲ್ಲಿ ಕೆಳಗಿನವು ಸೇರಿವೆ. ಆಂಪೆರೆಕ್ಸ್, ಮ್ಯಾಗ್ನಾವೋಕ್ಸ್, ಸಿಗ್ನೇಟಿಕ್ಸ್, ಮುಲ್ಲಾರ್ಡ್, VLSI, ಅಜಿಲೆಂಟ್ ಹೆಲ್ತ್‌ಕೇರ್ ಸೊಲ್ಯೂಷನ್ಸ್ ಗ್ರೂಪ್, ಮಾರ್ಕೋನಿ ಮೆಡಿಕಲ್ ಸಿಸ್ಟಮ್ಸ್, ADAC ಲ್ಯಾಬ್ಸ್, ATL ಉಲ್ಟ್ರಾಸೌಂಡ್, ವೆಸ್ಟಿಂಗ್‌ಹೌಸ್ನ ಭಾಗಗಳು ಮತ್ತು ಫಿಲ್ಕೊ ಮತ್ತು ಸಿಲ್ವೇನಿಯದ ಗ್ರಾಹಕ ವಿದ್ಯುನ್ಮಾನ ನಿರ್ವಹಣೆಗಳು. ಫಿಲಿಪ್ಸ್ ಸಿಲ್ವೇನಿಯ ವ್ಯಾಪಾರಮುದ್ರೆಯನ್ನು ತ್ಯಜಿಸಿತು. ಆಸ್ಟ್ರೇಲಿಯ, ಕೆನಡಾ, ಮೆಕ್ಸಿಕೊ,ನ್ಯೂಜಿಲೆಂಡ್, ಪೋರ್ಟೊ ರಿಕೊ ಮತ್ತು USAಗಳಲ್ಲಿ ಸೈಮನ್ಸ್‌ನ ಓಸ್ರಾಮ್ ಘಟಕ ಸಿಲ್ವೇನಿಯ ವ್ಯಾಪಾರ ಮುದ್ರೆಯ ಸ್ವಾಮ್ಯತೆ ಹೊಂದಿರುವುದನ್ನು ಹೊರತುಪಡಿಸಿದರೆ ಅದರ ಸ್ವಾಮ್ಯತೆಯನ್ನು SLI(ಸಿಲ್ವೇನಿಯ ಲೈಟಿಂಗ್ ಇಂಟರ್‌ನ್ಯಾಶನಲ್)ಈಗ ಪಡೆದಿದೆ. ಫಿಲಿಪ್ಸ್ ಮತ್ತು ಅಜಿಲೆಂಟ್ ಟೆಕ್ನಾಲಜೀಸ್ ನಡುವೆ ಸಮಾನ ಜಂಟಿ ಉದ್ಯಮವಾಗಿ 1999ರ ನವೆಂಬರ್‌ನಲ್ಲಿ ರೂಪುಗೊಂಡ ಬೆಳಕು ಸೂಸುವ ಡಯೋಡ್ ಉತ್ಪಾದಕ ಲುಮಿಲೆಡ್ಸ್ 2005ಆಗಸ್ಟ್‌ನಲ್ಲಿ ಫಿಲಿಪ್ಸ್ ಲೈಟಿಂಗ್ ಅಂಗಸಂಸ್ಥೆಯಾಯಿತು ಹಾಗು 2006ಡಿಸೆಂಬರ್‌ನಲ್ಲಿ ಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಯಿತು.[೮][೯]
ಇಸವಿ 2000ದಲ್ಲಿ ಫಿಲಿಪ್ಸ್ ಆಪ್ಟಿವಾ ಕಾರ್ಪೊರೇಷನ್‌ನನ್ನು ಖರೀದಿಸಿತು. ಇದು ವಿದ್ಯುತ್ ಹಲ್ಲುಜ್ಜುವ ಬ್ರಷ್ ಸೋನಿಕೇರ್ ತಯಾರಕ ಸಂಸ್ಥೆಯಾಗಿದೆ. ಕಂಪನಿಗೆ ಫಿಲಿಪ್ಸ್ ಓರಲ್ ಹೆಲ್ತ್‌ಕೇರ್ ಎಂದು ಮರುನಾಮಕರಣ ಮಾಡಿತು ಹಾಗೂ ಫಿಲಿಪ್ಸ್ DAPಯ ಅಂಗಸಂಸ್ಥೆಯಾಯಿತು. ಮಸಾಚುಸೆಟ್ಸ್‌ನ ಫ್ರಾಮಿಂಗ್‌ಹ್ಯಾಂನಲ್ಲಿ ಪ್ರಧಾನ ಕಾರ್ಯಾಲಯವಿರುವ ಲೈಫ್‌ಲೈನ್ ಸಿಸ್ಟಮ್ಸ್ ಕಂಪನಿಯನ್ನು ಫಿಲಿಪ್ಸ್ 2006ರಲ್ಲಿ ಖರೀದಿಸಿತು. ಫಿಲಿಪ್ಸ್ 2007 ಆಗಸ್ಟ್‌ನಲ್ಲಿ ತಮ್ಮ ಮೆಡಿಕಲ್ ಇನ್‌ಪಾರ್ಮೆಟಿಕ್ಸ್ ವಿಭಾಗಕ್ಕಾಗಿ ಎಲ್ ಪಾಸೊ, ಟೆಕ್ಸಾಸ್‌ನಲ್ಲಿ ಪ್ರಧಾನ ಕಾರ್ಯಾಲಯ ಹೊಂದಿರುವ ಕ್ಸಿಮಿಸ್ ಇಂಕ್. ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು.[೧೦]
2007 ಅಕ್ಟೋಬರ್‌ನಲ್ಲಿ TPL ಗ್ರೂಪ್‌ನಿಂದ ಇದು ಮೂರ್ ಮೈಕ್ರೋಪ್ರೋಸೆಸರ್ ಪೇಟೆಂಟ್ (MPP) ಪೋರ್ಟ್‌ಫೋಲಿಯೊ ಪರವಾನಗಿಯನ್ನು ಖರೀದಿಸಿತು.
ಇಸವಿ 2007 ಡಿಸೆಂಬರ್ 21ರಂದು ಫಿಲಿಪ್ಸ್ ಮತ್ತು ರೆಸ್ಪಿರೋನಿಕ್ಸ್ ಇಂಕ್. ದೃಢ ವಿಲೀನದ ಒಪ್ಪಂದ ಪ್ರಕಟಿಸಿತು. ಇದರ ಪ್ರಕಾರ, ಫಿಲಿಪ್ಸ್ ರೆಸ್ಪಿರೋನಿಕ್ಸ್‌ನ ಎಲ್ಲ ಬಾಕಿವುಳಿದ ಷೇರುಗಳನ್ನು ಪ್ರತಿ ಷೇರಿಗೆ US$66 ರಂತೆ ಸ್ವಾಧೀನಕ್ಕೆ ಟೆಂಡರ್ ಬಿಡುಗಡೆ ಆರಂಭಿಸುವುದು ಅಥವಾ ಪೂರ್ಣವಾದ ನಂತರ ಅಂದಾಜು €3.6 ಶತಕೋಟಿ(US$5.1 ಶತಕೋಟಿ)ಒಟ್ಟು ಖರೀದಿ ದರ ನಗದಿನಲ್ಲಿ ಪಾವತಿಸುವುದು.[೧೧]
ಸ್ಪಿನ್‌ಔಟ್ಸ್(ಸ್ವತಂತ್ರ)
[ಬದಲಾಯಿಸಿ]ರಿಯಾಡಿಯಸ್ ತಯಾರಕ[೧೨] ಪಾಲಿಮರ್ ವಿಷನ್[೧೩] ಫಿಲಿಪ್ಸ್ ಎಲೆಕ್ಟ್ರಾನಿಕ್ಸ್‌ನಿಂದ ಸ್ಪಿನ್‌ಔಟ್(ಸ್ವತಂತ್ರ) ಆಗಿದೆ.
APRICO ಸೊಲ್ಯೂಷನ್ಸ್ ಫಿಲಿಪ್ಸ್ ಇಂಟಲೆಕ್ಚ್ಯುಯಲ್ ಪ್ರಾಪರ್ಟಿ ಮತ್ತು ಸ್ಟಾಂಡರ್ಡ್ಸ್‌ನ ಉದ್ಯಮವಾಗಿದೆ.[೧೪]
ಫಿಲಿಪ್ಸ್ -ಡುಫಾರ್(ಡಚ್ ಫಾರ್ಮಾಕ್ಯುಟಿಕಲ್ಸ್)ಎಂದು ಚಿರಪರಿಚಿತವಾದ ಕಂಪನಿಯಲ್ಲಿ ಔಷಧಿ ಮಾರುಕಟ್ಟೆಗೆ ಅಡಿಯಿಟ್ಟಿತು. ಫಿಲಿಪ್ಸ್-ಡುಫಾರ್ ಬೆಳೆ ರಕ್ಷಣೆಗೆ ಉತ್ಪನ್ನಗಳು, ಪಶುವೈದ್ಯಕೀಯ ಔಷಧಿ ಮತ್ತು ಮಾನವ ಬಳಕೆಗೆ ಉತ್ಪನ್ನಗಳನ್ನು ತಯಾರಿಸಿತು. ಡುಫಾರ್‌ನ್ನು ಸಾಲ್ವೆಗೆ ಮಾರಾಟ ಮಾಡಲಾಯಿತು. ಈಗ ಅದು ಸಾಲ್ವೆ ಫಾರ್ಮಾಕ್ಯುಟಿಕಲ್ಸ್ ಎಂದು ಹೆಸರಾಗಿದೆ. ತರುವಾಯದ ವರ್ಷಗಳಲ್ಲಿ ವಿಭಾಗಗಳನ್ನು ಸಾಲ್ವೆ ಇತರೆ ಕಂಪನಿಗಳಿಗೆ ಮಾರಾಟ ಮಾಡಿತು.(ಬೆಳೆ ರಕ್ಷಣೆ ವಿಭಾಗವನ್ನು ಈಗ ಚೆಮ್ಟುರಾ ಎಂದು ಹೆಸರಾದ ಯೂನಿರಾಯಲ್‌ಗೆ ಮತ್ತು ಪಶುವೈದ್ಯ ವಿಭಾಗವನ್ನು ವೈಥ್ ವಿಭಾಗವಾದ ಫೋರ್ಟ್ ಡಾಡ್ಜ್‌ಗೆ ಮಾರಾಟ ಮಾಡಲಾಯಿತು).
ಕ್ರೀಡೆಗಳು, ಪ್ರಾಯೋಜಕತ್ವಗಳು ಮತ್ತು ಹೆಸರಿನ ಹಕ್ಕುಗಳು
[ಬದಲಾಯಿಸಿ]ಸಾಂಪ್ರದಾಯಿಕವಾಗಿ ಫಿಲಿಪ್ಸ್ ಕ್ರೀಡೆಗಳಲ್ಲಿ ಅತ್ಯಾಸಕ್ತಿ ಹೊಂದಿತ್ತು. ತನ್ನ ನೌಕರರಿಗೆ ಮನರಂಜನೆಯ ಆರೋಗ್ಯಕರ ಸ್ವರೂಪವನ್ನು ಮೂಲತಃ ಒದಗಿಸುವುದು ಅದರ ಗುರಿಯಾಗಿತ್ತು.
ಇಸವಿ 1913ರಲ್ಲಿ ಫ್ರಾನ್ಸ್‌ನಿಂದ ಡಚ್ ಸ್ವಾತಂತ್ರ್ಯ ಶತಮಾನೋತ್ಸವದ ಆಚರಣೆ ಪ್ರಯುಕ್ತ,ಫಿಲಿಪ್ಸ್ ಫಿಲಿಪ್ಸ್ ಸ್ಪೋರ್ಟ್ ವೆರನಿಗಿಂಗ್ (ಫಿಲಿಪ್ಸ್ ಸ್ಪೋರ್ಟ್ಸ್ ಕ್ಲಬ್),ಅಥವಾ PSVಎಂದು ಪರಿಚಿತವಾದ ಕ್ರೀಡಾ ಕ್ಲಬ್ ಸ್ಥಾಪಿಸಿತು. ಕ್ರೀಡಾ ಕ್ಲಬ್
ಎಲ್ಲ ರೀತಿಯ ಕ್ರೀಡೆಗಳನ್ನು ಒಳಗೊಂಡಿದೆ. ಆದರೆ ಸದ್ಯಕ್ಕೆ ಪ್ರೀಮಿಯರ್ ಲೀಗ್ ಫುಟ್ಬಾಲ್ ತಂಡ ಮತ್ತು ಅದರ ಈಜು ತಂಡಕ್ಕಾಗಿ ಅತ್ಯಂತ ಪ್ರಖ್ಯಾತಿ ಗಳಿಸಿದೆ. ಡಚ್ ಫುಟ್ಬಾಲ್ ತಂಡ PSV ಐಂಡ್‌ಹೋವನ್‌ನ ಆವಾಸಸ್ಥಾನವಾದ ಐಂಡನ್‌ಹೋವನ್‌ನಲ್ಲಿ ನೆಲೆಯಾಗಿರುವ ಫಿಲಿಪ್ಸ್ ಸ್ಟಾಡಿಯನ್‌ಗೆ ಹೆಸರಿನ ಹಕ್ಕುಗಳನ್ನು ಫಿಲಿಪ್ಸ್ ಹೊಂದಿದೆ.
ವಿದೇಶಗಳಲ್ಲಿ ಫಿಲಿಪ್ಸ್ ಪ್ರಾಯೋಜಕರು ಅಸಂಖ್ಯಾತ ಕ್ರೀಡಾ ಕ್ಲಬ್‌ಗಳಿಗೆ,ಕ್ರೀಡಾ ಸೌಲಭ್ಯಗಳಿಗೆ ಮತ್ತು ಆಟವಿಶೇಷಗಳಿಗೆ ಪ್ರಾಯೋಜಕತ್ವ ವಹಿಸಿದೆ. ಫಿಲಿಪ್ಸ್ ಇತ್ತೀಚೆಗೆ(ನವೆಂಬರ್ 2008 )ತನ್ನ ಯಶಸ್ವಿ F1 ಸಹಭಾಗಿತ್ವವನ್ನು AT&;T ವಿಲಿಯಮ್ಸ್ ಜತೆ ವಿಸ್ತರಿಸುವ ಮೂಲಕ ಇನ್ನೂ ಹೆಚ್ಚು ಉತ್ಪನ್ನ ಸಮೂಹಗಳನ್ನು ಒಳಗೊಂಡಿದೆ.
ಇಷ್ಟೇಅಲ್ಲದೇ ಫಿಲಿಪ್ಸ್ ಅಟ್ಲಾಂಟ ಜಾರ್ಜಿಯದ ಫಿಲಿಪ್ಸ್ ಅರೇನಾಗೆ ಹಾಗು ಆಸ್ಟ್ರೇಲಿಯದ ಪ್ರೀಮಿಯರ್ ಬ್ಯಾಸ್ಕೆಟ್‌ಬಾಲ್ಲೀಗ್ ಫಿಲಿಪ್ಸ್ ಚಾಂಪಿಯನ್‌ಷಿಪ್ ಗೆ ಹೆಸರಿನ ಹಕ್ಕುಗಳ ಸ್ವಾಮ್ಯತೆ ಪಡೆದಿದೆ. ಇದು ಸಾಂಪ್ರದಾಯಿಕವಾಗಿ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಲೀಗ್ ಎಂದು ಚಿರಪರಿಚಿತವಾಗಿದೆ. 1998 ಮತ್ತು 1993ರ ನಡುವೆ ಫಿಲಿಪ್ಸ್ ಆಸ್ಟ್ರೇಲಿಯದ ರಗ್ಬಿ ಲೀಗ್ ತಂಡ ಬಾಲ್ಮೇನ್ ಟೈಗರ್ಸ್‌ಗೆ ಮುಖ್ಯ ಪ್ರಾಯೋಜಕರು.
ಥೈಲ್ಯಾಂಡ್‌ನಲ್ಲಿ ಅದು PEA FCಪ್ರಾಯೋಜಕತ್ವ ವಹಿಸಿದೆ.
ಕ್ರೀಡೆಗಳ ಹೊರಗೆ ಫಿಲಿಪ್ಸ್ ಫಿಲಿಪ್ಸ್ ಮಾನ್ಸ್‌ಟರ್ಸ್ ಆಫ್ ರಾಕ್ ಫೆಸ್ಟಿವಲ್ ಪ್ರಾಯೋಜಕತ್ವ ವಹಿಸುತ್ತದೆ. ಇದು ವಿಶ್ವಾದ್ಯಂತ ಅನೇಕ ರಾಷ್ಟ್ರಗಳಲ್ಲಿ ನಡೆಯುತ್ತದೆ.
ವಿಶ್ವವ್ಯಾಪಿ ಉಪಸ್ಥಿತಿ
[ಬದಲಾಯಿಸಿ]ಫಿಲಿಪ್ಸ್ ಪ್ರಮುಖ ಗೃಹಬಳಕೆ ವಸ್ತುಗಳನ್ನು ಕೂಡ (ವೈಟ್‌ಗೂಡ್ಸ್) 'ಫಿಲಿಪ್ಸ್' ಹೆಸರಿನಲ್ಲಿ ಮಾರಾಟ ಮಾಡಿತು. ಪ್ರಮುಖ ಗೃಹಬಳಕೆಯ ವಸ್ತುಗಳ ವಿಭಾಗವನ್ನು ವಿರ್ಲ್‌ಪೂಲ್ ಕಾರ್ಪೋರೇಷನ್‌ಗೆ ಮಾರಾಟ ಮಾಡಿದ ಬಳಿಕ ಇದು 'ಫಿಲಿಪ್ಸ್ ವಿರ್ಲ್‌ಪೂಲ್' ಮತ್ತು 'ವಿರ್ಲ್‌ಪೂಲ್ ಫಿಲಿಪ್ಸ್' ಮೂಲಕ ' ವಿರ್ಲ್‌ಪೂಲ್' ಗೆ ಬದಲಾಯಿತು.
ವಿರ್ಲ್‌ಪೂಲ್ ಫಿಲಿಪ್ಸ್‌ನ ಪ್ರಮುಖ ಪರಿಕರ ನಿರ್ವಹಣೆಗಳಲ್ಲಿ 53% ಪಾಲನ್ನು ಖರೀದಿಸಿ, ವಿರ್ಲ್‌ಪೂಲ್ ಇಂಟರ್‌ನ್ಯಾಷನಲ್ ರಚಿಸಿತು. ವಿರ್ಲ್‌ಪೂಲ್ 1991ರಲ್ಲಿ ಫಿಲಿಪ್ಸ್‌ಗೆ ವಿರ್ಲ್‌ಪೂಲ್ ಇಂಟರ್‌ನ್ಯಾಷನಲ್‌ನಲ್ಲಿರುವ ಉಳಿದ ಆಸಕ್ತಿಗಳನ್ನು ಖರೀದಿಸಿತು.
ಫಿಲಿಪ್ಸ್ ಪ್ರಸಾರ ಮತ್ತು ಇಂಟರ್‌ನೆಟ್ ಕೈಗಾರಿಕೆ ಕಂಪೆನಿಗಳ ( SES ಆಸ್ಟ್ರಾ, ಹ್ಯುಮಾಕ್ಸ್, ಔಪನ್TV ಮತ್ತು ANT ಸಾಫ್ಟ್‌ವೇರ್ ಕೂಡ ಒಳಗೊಂಡಿವೆ) ಹೈಬ್ರಿಡ್ ಬ್ರಾಡ್‌ಕಾಸ್ಟ್ ಬ್ರಾಡ್‌ಬ್ಯಾಂಡ್ TV (HbbTV) ಒಕ್ಕೂಟದ ಸದಸ್ಯಕಂಪನಿಯಾಗಿದೆ. ಅದು ಏಕ ಬಳಕೆ ಇಂಟರ್‌ಫೇಸ್‌ನೊಂದಿಗೆ ಪ್ರಸಾರ TVಹಾಗು ಬ್ರಾಡ್‌ಬ್ಯಾಂಡ್ ಮಲ್ಟಿಮೀಡಿಯ ಬಳಕೆಗಳ ಸ್ವೀಕಾರಕ್ಕೆ ಮಿಶ್ರ ಸೆಟ್-ಟಾಪ್ ಬಾಕ್ಸ್‌ಗಳಿಗಾಗಿ ಮುಕ್ತ ಐರೋಪ್ಯ ಮಾನದಂಡ( HbbTVಎಂದು ಹೆಸರು)ದ ಪ್ರವರ್ತನೆ ಮತ್ತು ಸ್ಥಾಪಿಸುವುದಾಗಿದೆ.
ಆಸ್ಟ್ರೇಲಿಯಾ
[ಬದಲಾಯಿಸಿ]ಫಿಲಿಪ್ಸ್ ಆಸ್ಟ್ರೇಲಿಯ 1927ರಲ್ಲಿ ಸ್ಥಾಪಿತವಾಯಿತು ಹಾಗು ವರ್ಷಗಳ ಕಾಲ ವಿಶೇಷವಾಗಿ ಉತ್ಪಾದನೆ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಒಳಗೊಂಡಿತು. ಫಿಲಿಪ್ಸ್ ಆಸ್ಟ್ರೇಲಿಯ ನಾರ್ತ್ ರೈಡ್, ನ್ಯೂ ಸೌತ್ ವೇಲ್ಸ್‌ನಲ್ಲಿ ಪ್ರಧಾನ ಕಾರ್ಯಾಲಯವನ್ನು ಹೊಂದಿದೆ. ಕಂಪನಿಯು ರಾಷ್ಟ್ರವ್ಯಾಪಿ 400 ಜನರನ್ನು ಉದ್ಯೋಗಕ್ಕೆ ನೇಮಕ ಮಾಡಿದೆ.
ಪ್ರಾದೇಶಿಕ ಮಾರಾಟ ಮತ್ತು ಬೆಂಬಲ ಕಚೇರಿಗಳು ಮೆಲ್ಬೋರ್ನ್, ಬ್ರಿಸ್ಬೇನ್, ಅಡಿಲೇಡ್ಮತ್ತು ಪರ್ತ್‌ನಲ್ಲಿ ನೆಲೆಗೊಂಡಿದೆ.
ಮಾಹಿತಿ ತಂತ್ರಜ್ಞಾನ ಮೂಲಸೌಲಭ್ಯ ಸೇವೆಗಳನ್ನು APAC ರೀಜನಲ್ ರಿವರ್ ಒಪ್ಪಂದದ ಅಡಿಯಲ್ಲಿ IBM ಒದಗಿಸುತ್ತದೆ ಮತ್ತು ಫಿಲಿಪ್ಸ್ ITIನಿರ್ವಹಿಸುತ್ತದೆ.
ಪ್ರಸಕ್ತ ನಿರ್ವಹಣಾ ಕ್ಷೇತ್ರಗಳು/ಚಟುವಟಿಕೆಗಳು ಒಳಗೊಂಡಿವೆ;
- ಫಿಲಿಪ್ಸ್ ಹೆಲ್ತ್‌ಕೇರ್ (ನ್ಯೂಜಿಲೆಂಡ್ ವಹಿವಾಟುಗಳಿಗೆ ಕೂಡ ಜವಾಬ್ದಾರಿ)
- ಫಿಲಿಪ್ಸ್ ಲೈಟಿಂಗ್ (ನ್ಯೂಜಿಲೆಂಡ್ ವಹಿವಾಟುಗಳಿಗೆ ಕೂಡ ಜವಾಬ್ದಾರಿ)
- ಫಿಲಿಪ್ಸ್ ಕನ್ಸ್ಯೂಮರ್ ಲೈಫ್‌ಸ್ಟೈಲ್ (ನ್ಯೂಜಿಲೆಂಡ್ ವಹಿವಾಟುಗಳಿಗೆ ಕೂಡ ಜವಾಬ್ದಾರಿ)
- ಫಿಲಿಪ್ಸ್ ಡಿಕ್ಟೇಷನ್ ಸಿಸ್ಟಮ್ಸ್
- ಫಿಲಿಪ್ಸ್ ಡೈನಾಲೈಟ್ (ಲೈಟಿಂಗ್ ಕಂಟ್ರೋಲ್ ಸಿಸ್ಟಮ್ಸ್ ,2009ರಲ್ಲಿ ಸ್ವಾಧೀನ)
- ಫಿಲಿಪ್ಸ್ ಲುಮಿಲೆಡ್ಸ್(ಲುಮಿಲೆಡ್-LED ಲೈಟ್ಸ್, ಕ್ಯಾಮೆರಾ ಫ್ಲ್ಯಾಷ್ ರೀತಿಯಲ್ಲಿ ಸೆಲ್‌ಫೋನ್‌ನಲ್ಲಿ ಬಳಕೆ. ಒಂದು ಉದಾಹರಣೆಸೋನಿ ಎರಿಕ್‌ಸನ್ W995 ಫ್ಲ್ಯಾಷ್.)
2009ರಲ್ಲಿದ್ದಂತೆ ಫಿಲಿಪ್ಸ್ ತನ್ನ ಬಹುತೇಕ AV ಉತ್ಪನ್ನಗಳನ್ನು ಆಸ್ಟ್ರೇಲಿಯದಿಂದ ಹಿಂತೆಗೆದುಕೊಂಡಿತು. ಇದು ಈಗ ಸಣ್ಣ ಉಪಕರಣ ಮರುಮಾರಾಟ ಸಂಸ್ಥೆಯಾಗಿದೆ. ಈ ಉತ್ಪನ್ನಗಳನ್ನು ವಿತರಕನೊಬ್ಬ ಮಾರಾಟ ಮಾಡುತ್ತಾನೆ.
ಬ್ರೆಜಿಲ್
[ಬದಲಾಯಿಸಿ]ಫಿಲಿಪ್ಸ್ ಡು ಬ್ರೆಸಿಲ್ 1924ರಲ್ಲಿ ಸ್ಥಾಪಿತವಾಯಿತು.[೧೫] 1929ರಲ್ಲಿ ಫಿಲಿಪ್ಸ್ ರೇಡಿಯೊ ರಿಸೀವರ್‌ಗಳ ಮಾರಾಟ ಆರಂಭಿಸಿತು. 1930ರ ದಶಕದಲ್ಲಿ ಫಿಲಿಪ್ಸ್ ಬ್ರೆಜಿಲ್‌ನಲ್ಲಿ ಬೆಳಕಿನ ಬಲ್ಬ್‌ಗಳು ಮತ್ತು ರೇಡಿಯೋ ರಿಸೀವರ್‌ಗಳ ತಯಾರಿಕೆ ಆರಂಭಿಸಿತು. 1939ರಿಂದ 1945ರವರೆಗೆ, ವಿಶ್ವಯುದ್ಧದ ಕಾರಣದಿಂದ ಫಿಲಿಪ್ಸ್‌ನ ಬ್ರೆಜಿಲಿಯನ್ ವಿಭಾಗವು ಬೈಸಿಕಲ್ಗಳು, ರೆಫ್ರಿಜಿರೇಟರ್‌ಗಳು ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕಾಯಿತು. ಯುದ್ಧದ ನಂತರ, ಫಿಲಿಪ್ಸ್‌ಗೆ ಬ್ರೆಜಿಲ್‌ನಲ್ಲಿ ಮಹಾ ಕೈಗಾರಿಕೆ ವಿಸ್ತರಣೆ ಉಂಟಾಯಿತು. ಮಾನಾಸ್ ಮುಕ್ತ ವಲಯದಲ್ಲಿ ಸ್ಥಾಪಿತವಾದ ಪ್ರಥಮ ಗುಂಪುಗಳಲ್ಲಿ ಫಿಲಿಪ್ಸ್ ಒಂದಾಗಿದೆ. 1970ರ ದಶಕದಲ್ಲಿ, ಫಿಲಿಪ್ಸ್ ರೆಕಾರ್ಡ್ಸ್ ಬ್ರೆಜಿಲ್ ರೆಕಾರ್ಡಿಂಗ್ ಉದ್ಯಮದಲ್ಲಿ ಪ್ರಮುಖ ಪಾತ್ರಧಾರಿಯಾಯಿತು. ಇಂದಿನದಿನಗಳಲ್ಲಿ, ಬ್ರೆಜಿಲ್‌ನಲ್ಲಿ ಫಿಲಿಪ್ಸ್ ಡು ಬ್ರೆಸಿಲ್ ವಿದೇಶಿ ಸ್ವಾಮ್ಯದ ಕಂಪನಿಗಳಲ್ಲಿ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾಗಿದೆ.
ಕೆನಡಾ
[ಬದಲಾಯಿಸಿ]ಅನೇಕ ವರ್ಷಗಳವರೆಗೆ ಫಿಲಿಪ್ಸ್ ಫಿಲಿಪ್ಸ್ ಕೆನಡಾದಲ್ಲಿ ಬೆಳಕಿನ ವ್ಯವಸ್ಥೆಯ ಉತ್ಪನ್ನಗಳನ್ನು ತಯಾರಿಸಿತು. ಕೆನಡಾದಲ್ಲಿ ಅದು ಎರಡು ಕಾರ್ಖಾನೆಗಳನ್ನು ಹೊಂದಿದೆ.
ಒಂದು ವಿಂಡ್ಸರ್, ON. ಇದನ್ನು ಫಿಲಿಪ್ಸ್ 1971ರಲ್ಲಿ ಆರಂಭಿಸಿತು. ಕಾರ್ಖಾನೆಯು A19 ವಿದ್ಯುದ್ದೀಪಗಳನ್ನು ತಯಾರಿಸಿತು(ರಾಯೇಲ್ ದೀರ್ಘಬಾಳಿಕೆಯ ಬಲ್ಬ್‌ಗಳು ಸೇರಿದಂತೆ), PAR38ದೀಪಗಳನ್ನು ಮತ್ತು T19ದೀಪಗಳನ್ನು ಉತ್ಪಾದಿಸಿತು.(ಮೂಲತಃ ವೆಸ್ಟಿಂಗ್‌ಹೌಸ್ ಲ್ಯಾಂಪ್ ಆಕಾರ). ಫಿಲಿಪ್ಸ್ 2003ರಲ್ಲಿ ತನ್ನ ಕಾರ್ಖಾನೆಯನ್ನು ಮುಚ್ಚಿತು.
ಇನ್ನೊಂದು ಘಟಕವು ಟ್ರಾಯಿಸ್-ರಿವರೀಸ್, ಕ್ವಿಬೆಕ್‌ನಲ್ಲಿದೆ. ಇದು ಮುಂಚೆ ವೆಸ್ಟಿಂಗ್‌ಹೌಸ್ ಕಾರ್ಖಾನೆಯಾಗಿದ್ದು, ಫಿಲಿಪ್ಸ್ ವೆಸ್ಟಿಂಗ್‌ಹೌಸ್ ಲ್ಯಾಂಪ್ ವಿಭಾಗವನ್ನು '83ರಲ್ಲಿ ಖರೀದಿಸಿ ಅದನ್ನು ನಡೆಸಲಾರಂಭಿಸಿತು. ಫಿಲಿಪ್ಸ್ ಕೆಲವು ವರ್ಷಗಳ ನಂತರ 80ರ ದಶಕದ ಅಂತ್ಯದಲ್ಲಿ ಈ ಕಾರ್ಖಾನೆಯನ್ನು ಮುಚ್ಚಿತು.
ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ
[ಬದಲಾಯಿಸಿ]2008ರ ಪೂರ್ವದಲ್ಲಿ ರಾಯಲ್ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ ವಿಭಾಗವಾದ ಫಿಲಿಪ್ಸ್ ಲೈಟಿಂಗ್ ಕಂಪನಿಯ ಉತ್ಪನ್ನಗಳನ್ನು ಏಷ್ಯಾದ ವಾಹನಗಳಿಗೆ ಅಳವಡಿಸುವುದಕ್ಕಾಗಿ ಸಣ್ಣ ಎಂಜಿನಿಯರಿಂಗ್ ಕೇಂದ್ರವನ್ನು ಆರಂಭಿಸಿತು.[೧೬]
ಹಾಂಕಾಂಗ್
[ಬದಲಾಯಿಸಿ]ಫಿಲಿಪ್ಸ್ ಹಾಂಕಾಂಗ್ 1948ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು. ಫಿಲಿಪ್ಸ್ ಹಾಂಕಾಂಗ್ ಫಿಲಿಪ್ಸ್' ಆಡಿಯೊ ಬಿಸಿನೆಸ್ ಘಟಕದ ಜಾಗತಿಕ ಪ್ರಧಾನ ಕಾರ್ಯಾಲಯಕ್ಕೆ ನೆಲೆಯಾಗಿದೆ. ಇದು ಫಿಲಿಪ್ಸ್ ಏಷ್ಯಾ ಪೆಸಿಫಿಕ್ ಪ್ರಾದೇಶಿಕ ಕಚೇರಿಗೆ ಕೂಡ ನೆಲೆಯಾಗಿದೆ ಹಾಗು ಡಿಸೈನ್ ಡಿವಿಷನ್, ಡೊಮೆಸ್ಟಿಕ್ ಅಪ್ಲೈಯೆನ್ಸಸ್ &ಪರ್ಸನಲ್ ಕೇರ್ ಪ್ರಾಡಕ್ಟ್ಸ್ ಡಿವಿಷನ್, ಲೈಟಿಂಗ್ ಪ್ರಾಡಕ್ಟ್ಸ್ ಡಿವಿಷನ್ ಮತ್ತು ಮೆಡಿಕಲ್ ಸಿಸ್ಟಮ್ಸ್ ಪ್ರಾಡಕ್ಸ್ಟ್ ಡಿವಿಷನ್‌ನ ಮುಖ್ಯ ಕಾರ್ಯಾಲಯಗಳಿಗೆ ನೆಲೆಯಾಗಿದೆ.[೧೭]
ಇದು ಹಾಂಕಾಂಗ್‌ನಲ್ಲಿ ಬೆಳಕಿನ ವ್ಯವಸ್ಥೆಯ ಕಾರ್ಖಾನೆಯನ್ನು ಕೂಡ ಒಳಗೊಂಡಿದೆ. 11 ಸ್ವಯಂಚಾಲಿತ ಉತ್ಪಾದನೆ ಮಾರ್ಗಗಳ ಅಳವಡಿಕೆಯೊಂದಿಗೆ ವಾರ್ಷಿಕ 200 ದಶಲಕ್ಷ ಪೀಸ್‌ಗಳನ್ನು ಉತ್ಪಾದಿಸುತ್ತದೆ. ಫಿಲಿಪ್ಸ್ ಲೈಟ್ ಫ್ಯಾಕ್ಟರಿ 1974ರಲ್ಲಿ ಸ್ಥಾಪಿತವಾಯಿತು. ಈಗ ISO9001:2000 & ISO14001ದೊಂದಿಗೆ ಪ್ರಮಾಣೀಕೃತವಾಗಿದೆ. ಅದರ ಉತ್ಪನ್ನಗಳು ಪ್ರಿಫೋಕಸ್, ಲೆನ್ಸೆಂಡ್‌ನಿಂದ ಹಿಡಿದು E10 ಕಿರು ಲೈಟ್ ಬಲ್ಬ್‌ಗಳವರೆಗೆ ಇದೆ.[೧೭]
ಫ್ರಾನ್ಸ್
[ಬದಲಾಯಿಸಿ]ಫಿಲಿಪ್ಸ್ ಫ್ರಾನ್ಸ್ ಸುರೆಸ್‌ನೆಸ್‌ನಲ್ಲಿ ತನ್ನ ಪ್ರಧಾನಕಾರ್ಯಾಲಯವನ್ನು ಹೊಂದಿದೆ. ಕಂಪನಿಯು ರಾಷ್ಟ್ರವ್ಯಾಪಿ 3600 ಜನರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿದೆ.
- ಫಿಲಿಪ್ಸ್ ಲೈಟಿಂಗ್: ಚಾಲೊನ್-ಸುರ್-ಸಾವೋನ್ ಉತ್ಪಾದಕರು (ಫ್ಲೂರೊಸೆಂಟ್ ದೀಪಗಳು), ಚಾರ್ಟ್ರೆಸ್ (ವಾಹನ ದೀಪ ವ್ಯವಸ್ಥೆ), ಲ್ಯಾಮೊಟೆ-ಬೆವರೋನ್ ( LEDಯ ವಾಸ್ತುವಿನ್ಯಾಸ ದೀಪವ್ಯವಸ್ಥೆ ಮತ್ತು ವೃತ್ತಿಪರ ಒಳಾಂಗಣ ದೀಪವ್ಯವಸ್ಥೆ), ಲಾಂಗ್‌ವಿಕ್ (ದೀಪಗಳು), ಮಿರಿಬೆಲ್ (ಹೊರಾಂಗಣ ದೀಪವ್ಯವಸ್ಥೆ), ನೆವೆರ್ಸ್ (ವೃತ್ತಿಪರ ಒಳಾಂಗಣ ದೀಪವ್ಯವಸ್ಥೆ), ಪಾಂಟ್-ಎ-ಮೌಸ್ಸನ್ (ಹ್ಯಾಲೊಜನ್ ದೀಪಗಳು).
ಭಾರತ
[ಬದಲಾಯಿಸಿ]ಫಿಲಿಪ್ಸ್ ಫಿಲಿಪ್ಸ್ ಎಲೆಕ್ಟ್ರಿಕಲ್ ಕಂ. ( ಎಂಬ ಹೆಸರಿನಲ್ಲಿ 1930ರಲ್ಲಿ ಭಾರತದಲ್ಲಿ ಕೊಲ್ಕತ್ತ(ಕಲ್ಕತ್ತ) ಎಂಬಲ್ಲಿ ತನ್ನ ಕಾರ್ಯಾಚರಣೆಗಳನ್ನು ಆರಂಭಿಸಿತು.(ಇಂಡಿಯ) ಪ್ರೈ.ಲಿ , 75 ಮಂದಿ ಸಿಬ್ಬಂದಿಯನ್ನು ಹೊಂದಿತ್ತು. ಇದು ವಿದೇಶದಿಂದ ಆಮದುಮಾಡಿಕೊಂಡ ಫಿಲಿಪ್ಸ್ ವಿದ್ಯುದ್ದೀಪಗಳಿಗೆ ಮಾರಾಟದ ಹೊರಮಾರ್ಗವಾಗಿತ್ತು.
1938ರಲ್ಲಿ,ಫಿಲಿಪ್ಸ್ ಇಂಡಿಯ ಕೊಲ್ಕತ್ತಾದಲ್ಲಿ ಪ್ರಥಮ ಭಾರತದ ವಿದ್ಯುದ್ದೀಪ ಉತ್ಪಾದನೆ ಕಾರ್ಖಾನೆಯನ್ನು ಸ್ಥಾಪಿಸಿತು. 1948ರಲ್ಲಿ ಎರಡನೇ ಮಹಾಯುದ್ಧ ಸಂಭವಿಸಿದ ನಂತರ, ಫಿಲಿಪ್ಸ್ ಕೊಲ್ಕತ್ತಾದಲ್ಲಿ ರೇಡಿಯೊ ಉತ್ಪಾದನೆಯನ್ನು ಆರಂಭಿಸಿತು. 1959ರಲ್ಲಿ, ಪುಣೆಯ ಬಳಿ ಎರಡನೇ ರೇಡಿಯೊ ಕಾರ್ಖಾನೆಯನ್ನು ಸ್ಥಾಪಿಸಲಾಯಿತು.
- 1957ರಲ್ಲಿ ಕಂಪನಿಯು ಸಾರ್ವಜನಿಕ ನಿಯಮಿತ ಕಂಪನಿಯಾಗಿ ಪರಿವರ್ತನೆಯಾಗಿ, "ಫಿಲಿಪ್ಸ್ ಇಂಡಿಯ ಲಿ." ಎಂದು ಮರುಹೆಸರು ಪಡೆಯಿತು.
- 1965ರ ಏಪ್ರಿಲ್ 3ರಂದು ಒಂದು ದಶಲಕ್ಷದ ಫಿಲಿಪ್ಸ್ ರೇಡಿಯೊ ಭಾರತದಲ್ಲಿ ತಯಾರಾಯಿತು.
- 1970ರಲ್ಲಿ ಹೊಸ ಗ್ರಾಹಕ ವಿದ್ಯುನ್ಮಾನ ಕಾರ್ಖಾನೆಯು ಪುಣೆಯ ಬಳಿ ಪಿಂಪ್ರಿಯಲ್ಲಿ ಆರಂಭವಾಯಿತು. (ಈ ಕಾರ್ಖಾನೆಯನ್ನು 2006ರಲ್ಲಿ ಮುಚ್ಚಲಾಯಿತು.)
- 1982ರಲ್ಲಿ ಫಿಲಿಪ್ಸ್ ಹೊರಾಂಗಣ ಪ್ರಸಾರ ವಾಹನಗಳನ್ನು IX ಏಷ್ಯನ್ ಗೇಮ್ಸ್‌ಸಂದರ್ಭದಲ್ಲಿ DD ನ್ಯಾಷನಲ್‌ಗೆ ಸರಬರಾಜುಮಾಡುವುದರೊಂದಿಗೆ ಬಣ್ಣದ ಟೆಲಿವಿಷನ್ ಪ್ರಸಾರ ಕಾರ್ಯಕ್ರಮವನ್ನು ಭಾರತಕ್ಕೆ ತಂದಿತು.
- 1996ರಲ್ಲಿ ಫಿಲಿಪ್ಸ್ ಸಾಫ್ಟ್‌ವೇರ್ ಸೆಂಟರ್ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.(ಇದನ್ನು ಈಗ ಫಿಲಿಪ್ಸ್ ಇನ್ನೊವೇಷನ್ ಕ್ಯಾಂಪಸ್ Archived 2 February 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಎಂದು ಕರೆಯಲಾಗುತ್ತದೆ).
- 2008ರಲ್ಲಿ ಫಿಲಿಪ್ಸ್ ಹೊಸ ಉತ್ಪನ್ನ ವರ್ಗವಾದ ಜಲಶುದ್ಧಿಕಾರಿಗಳ ತಯಾರಿಕೆಗೆ ಕಾಲಿರಿಸಿತು. ಭಾರತದಲ್ಲಿ ವಿನ್ಯಾಸಗೊಂಡು ತಯಾರಾದ ಇವುಗಳನ್ನು ಇತರೆ ರಾಷ್ಟ್ರಗಳಿಗೆ ರಫ್ತು ಮಾಡಲಾಯಿತು.
2008ರಲ್ಲಿದ್ದಂತೆ ಫಿಲಿಪ್ಸ್ ಇಂಡಿಯ 4000 ನೌಕರರನ್ನು ಹೊಂದಿದೆ.
ಇಸ್ರೇಲ್
[ಬದಲಾಯಿಸಿ]ಫಿಲಿಪ್ಸ್ 1948ರಿಂದೀಚೆಗೆ ಇಸ್ರೇಲ್‌ನಲ್ಲಿ ಸಕ್ರಿಯವಾಗಿತ್ತು ಹಾಗು 1998ರಲ್ಲಿ ಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್(ಇಸ್ರೇಲ್)ಲಿ. ಸ್ಥಾಪಿಸಿತು. ಕಂಪನಿಯು ಇಸ್ರೇಲ್‌ನಲ್ಲಿ 600 ನೌಕರರನ್ನು ಹೊಂದಿದ್ದು, 2007ರಲ್ಲಿ $೩೦೦ ದಶಲಕ್ಷಕ್ಕಿಂತ ಹೆಚ್ಚು ಮಾರಾಟಗಳನ್ನು ಸೃಷ್ಟಿಸಿದೆ.[೧೮]
- ಫಿಲಿಪ್ಸ್ ಮೆಡಿಕಲ್ ಸಿಸ್ಟಮ್ಸ್ ಟೆಕ್ನಾಲಜೀಸ್ ಲಿ. (ಹೈಫಾ) ರೋಗನಿರ್ಣಯ ಮತ್ತು ವೈದ್ಯಕೀಯ ಚಿತ್ರತೆಗೆಯುವ ವ್ಯವಸ್ಥೆಗಳಾದ ಕಂಪ್ಯೂಟರೀಕೃತ ತಲಲೇಖನ (CT)ದ ಅಭಿವೃದ್ಧಿ ಮತ್ತು ಉತ್ಪಾದಕ ಕಂಪನಿಯಾಗಿದೆ. ಕಂಪನಿಯನ್ನು 1969ರಲ್ಲಿ ಎಲ್ರಾನ್ ಎಲೆಕ್ಟ್ರಾನಿಕ್ ಇಂಡಸ್ಟ್ರೀಸ್‌ನಿಂದ ಎಲ್ಸಿಂಟ್ ಹೆಸರಿನಲ್ಲಿ 1969ರಲ್ಲಿ ಸ್ಥಾಪಿಸಲಾಯಿತು ಹಾಗು 1998ರಲ್ಲಿ ಮಾರ್ಕೊನಿ ಮೆಡಿಕಲ್ ಸಿಸ್ಟಮ್ಸ್ ಸ್ವಾಧೀನಕ್ಕೆ ತೆಗೆದುಕೊಂಡಿತು. ಅದನ್ನು ಸ್ವತಃ ಫಿಲಿಪ್ಸ್ 2001ರಲ್ಲಿ ಸ್ವಾಧೀನಕ್ಕೆ ತೆಗೆದುಕೊಂಡಿತು.
- ಫಿಲಿಪ್ಸ್ ಸೆಮಿಕಂಡಕ್ಟರ್ಸ್ ಇಸ್ರೇಲ್, ಈಗNXP ಅರೆವಾಹಕಗಳ ಭಾಗವಾಗಿದೆ.
ಮೆಕ್ಸಿಕೋ
[ಬದಲಾಯಿಸಿ]- ಫಿಲಿಪ್ಸ್ ಮೆಕ್ಸಿಕಾನ SA ಡೆ CV ಕಾರ್ಪೊರೇಟ್ ಕಚೇರಿಯು ಮೆಕ್ಸಿಕೊ ನಗರದಲ್ಲಿ ನೆಲೆಗೊಂಡಿದೆ.
ಮೆಕ್ಸಿಕೊದಲ್ಲಿ ಅನೇಕ ಉತ್ಪಾದನೆ ಘಟಕಗಳಿವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:
ಫಿಲಿಪ್ಸ್ ಲೈಟಿಂಗ್ ಇಲ್ಲಿವೆ :
- ಮೊಂಟೆರೆ, ನುವೊ ಲಿಯನ್
- ಸಿಯುಡಾಡ್ ಜಾರೆಸ್, ಚಿಯುಆಹುವಾ
- ಟಿಜುನಿಯ, ಬಾಜಾ ಕ್ಯಾಲಿಫೋರ್ನಿಯ
ಫಿಲಿಪ್ಸ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್:
- ಸಿಯುಡಾಡ್ ಜಾರೆಜ್, ಚಿಹುಅಹುವಾ
ಫಿಲಿಪ್ಸ್ ಗೃಹೋಪಯೋಗಿ ಉಪಕರಣಗಳನ್ನು ಮೆಕ್ಸಿಕೊ ನಗರದ ವ್ಯಾಲೆಜೊ ಕೈಗಾರಿಕೆ ವಲಯದ ದೊಡ್ಡ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತಿತ್ತು. ಆದರೆ ಅದನ್ನು 2003–2004ರಲ್ಲಿ ಮುಚ್ಚಲಾಯಿತು.
ಪೋಲೆಂಡ್
[ಬದಲಾಯಿಸಿ]- ಐರೋಪ್ಯ ಹಣಕಾಸು ಮತ್ತು ಲೆಕ್ಕಪತ್ರ ಕೇಂದ್ರ ಲಾಡ್ಜ್
- ಫಿಲಿಪ್ಸ್ ಲೈಟಿಂಗ್: ಬೈಲೆಸ್ಕೊ-ಬಾಲಾ, ಪ್ಲಾಬಿಯಾನೈಸ್, ಪಿಲಾ,
- ಫಿಲಿಪ್ಸ್ ಗೃಹೋಪಯೋಗಿ ಉಪಕರಣಗಳು: ಬಯಾಲ್‌ಸ್ಟಾಕ್
ಇಂಗ್ಲೆಂಡ್
[ಬದಲಾಯಿಸಿ]ಫಿಲಿಪ್ಸ್ UK , ಸರ್ರೆಯ ಗಿಲ್ಡ್‌ಫೋರ್ಡ್‌ನಲ್ಲಿ ತನ್ನ ಮುಖ್ಯ ಕಾರ್ಯಾಲಯ ವನ್ನು ಹೊಂದಿದೆ. The ಕಂಪನಿ ರಾಷ್ಟ್ರವ್ಯಾಪಿ 2500ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಅಫಿಸಿಯಲ್ ಫಿಲಿಪ್ಸ್ UK ವೆಬ್‌ಸೈಟ್.
- ಫಿಲಿಪ್ಸ್ ಅಪ್ಲೈಡ್ ಟೆಕ್ನಾಲಜಿ, ರೆಡ್‌ಹಿಲ್, ಸರ್ರೆ ಡಿಜಿಟಲ್ TV ಮತ್ತು ಸಂವಹನ ತಂತ್ರಜ್ಞಾನಗಳು ಸೇರಿದಂತೆ ಹೊಸ ಉತ್ಪನ್ನಗಳು ಮತ್ತು ಉಪಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತದೆ.
- ಫಿಲಿಪ್ಸ್ ಹೆಲ್ತ್‌ಕೇರ್ ಇನ್ಫೋರ್ಮಾಟಿಕ್ಸ್, ಬೆಲ್‌ಫಾಸ್ಟ್ ಆರೋಗ್ಯಸೇವೆ ಸಾಫ್ಟ್‌ವೇರ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತದೆ.
- ಫಿಲಿಪ್ಸ್ ಬಿಸಿನೆಸ್ ಕಮ್ಯುನಿಕೇಷನ್ಸ್, ಕೇಂಬ್ರಿಜ್ ಧ್ವನಿ ಮತ್ತು ದತ್ತಾಂಶ ಸಂವಹನ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿದೆ. ಕಸ್ಟಮರ್ ರಿಲೇಷನ್‌ಶಿಪ್ ಮ್ಯಾನೇಜ್‌ಮೆಂಟ್ (CRM) ಅಪ್ಲಿಕೇಷನ್ಸ್, IP ಟೆಲಿಫೋನಿ, ದತ್ತಾಂಶ ಜಾಲ, ಧ್ವನಿ ಸಂಸ್ಕರಣೆ, ಆದೇಶ ಮತ್ತು ನಿಯಂತ್ರಣ ವ್ಯವಸ್ಥೆಗಳು ಹಾಗೂ ತಂತಿರಹಿತ ಮತ್ತು ಮೊಬೈಲ್ ಟೆಲಿಫೋನಿಯಲ್ಲಿ ತಜ್ಞತೆ ಹೊಂದಿದೆ[೧೯].
- ಫಿಲಿಪ್ಸ್ ಕನ್ಸೂಮರ್ ಪ್ರಾಡಕ್ಸ್, ಗಿಲ್ಡ್‌ಫೋರ್ಡ್ ಮಾರಾಟ ಮತ್ತು ಮಾರುಕಟ್ಟೆಗಳನ್ನು ಟೆಲಿವಿಷನ್‌ಗಳಿಗೆ ಒದಗಿಸುತ್ತದೆ. ಹೈ ಡೆಫಿನೇಶನ್ ಟೆಲಿವಿಷನ್‌ಗಳು, DVD ರಿಕಾರ್ಡರ್‌ಗಳು,ಹೈ-ಫೈ ಮತ್ತು ಪೋರ್ಟಬಲ್ ಆಡಿಯೊ, CD ರೆಕಾರ್ಡರ್‌ಗಳು, PC ಬಾಹ್ಯವಸ್ತುಗಳು, ತಂತಿರಹಿತ ದೂರವಾಣಿಗಳು,ಮನೆ ಮತ್ತು ಅಡುಗೆ ಸಲಕರಣೆಗಳು, ವೈಯಕ್ತಿಕ ಪಾಲನೆ (ಶೇವರ್‌ಗಳು, ಹೇರ್ ಡ್ರೈಯರ್, ದೇಹ ಸೌಂದರ್ಯ ಹಾಗು ಮೌಖಿಕ ನೈರ್ಮಲ್ಯ ).
- ಫಿಲಿಪ್ಸ್ ಡಿಕ್ಟೇಷನ್ ಸಿಸ್ಟಮ್ಸ್ ಕಾಲ್‌ಚೆಸ್ಟರ್, ಎಸ್ಸೆಕ್ಸ್.
- ಫಿಲಿಪ್ಸ್ ಲೈಟಿಂಗ್: ಗಿಲ್ಡ್‌ಫೋರ್ಡ್‌ನಿಂದ ಮಾರಾಟ ಮತ್ತು ಹ್ಯಾಮಿಲ್ಟನ್, ಲನಾರ್ಕ್‌ಶೈರ್.
- ಫಿಲಿಪ್ಸ್ ಹೆಲ್ತ್‌ಕೇರ್, ರೈಗೇಟ್, ಸರ್ರೆ. ಶ್ರವಣಾತೀತ ಧ್ವನಿ,ಬೈಜಿಕ ವೈದ್ಯಕೀಯ,ರೋಗಿಯ ಮೇಲ್ವಿಚಾರಣೆ, ಕಾಂತೀಯ ಅನುರಣನ, ಗಣಕಯಂತ್ರ ಬಳಸಿದ ತಲಲೇಖ ಮತ್ತು ನವೀಕೃತ ಉತ್ಪನ್ನಗಳಿಗೆ ಮಾರಾಟ ಮತ್ತು ತಾಂತ್ರಿಕ ಬೆಂಬಲ.
- ಫಿಲಿಪ್ಸ್ ರಿಸರ್ಚ್ ಲ್ಯಾಬೊರೇಟರೀಸ್ ಕೇಂಬ್ರಿಜ್ (2008ರವರೆಗೆ ರೆಡ್‌ಹಿಲ್,ಸರ್ರೆಯಲ್ಲಿ ನೆಲೆಗೊಂಡಿತ್ತು. ಮೂಲತಃ ಇವು ಮುಲ್ಲಾರ್ಡ್ ರಿಸರ್ಚ್ ಲ್ಯಾಬೋರೇಟರೀಸ್.)
- ಫಿಲಿಪ್ಸ್ ಅರೆವಾಹಕಗಳು, ಹೇಜಲ್ ಗ್ರೋವ್, ಸ್ಟಾಕ್‌ಪೋರ್ಟ್, ಗ್ರೇಟರ್ ಮ್ಯಾಂಚೆಸ್ಟರ್ ಮತ್ತುಸೌತಾಂಪ್ಟನ್, ಹ್ಯಾಂಪ್‌ಶೈರ್,ಇವೆರಡೂ ಮುಲ್ಲಾರ್ಡ್‌ನ ಮುಂಚಿನ ಭಾಗವಾಗಿದೆ. ಈಗ ಅವು NXP ಭಾಗವಾಗಿದೆ.
ಹಿಂದೆ ಫಿಲಿಪ್ಸ್ UK ಕೂಡ ಸೇರಿಕೊಂಡಿತ್ತು.
- ಕ್ರಾಯ್‌ಡನ್‌ನಲ್ಲಿ ಗ್ರಾಹಕ ಉತ್ಪನ್ನ ತಯಾರಿಕೆ
- ಫಿಲಿಪ್ಸ್ ಗೃಹಬಳಕೆ ಸಲಕರಣೆಗಳು: ಹೇಸ್ಟಿಂಗ್‌ನಲ್ಲಿ ವಿದ್ಯುತ್ ಕೆಟಲ್ ಉತ್ಪಾದನೆ.
- ಲಂಡನ್ ಕ್ಯಾರಿಯರ್ಸ್, ವ್ಯವಸ್ಥಾಪನ ತಂತ್ರ ಮತ್ತು ಸಾರಿಗೆ ವಿಭಾಗ
- ಮುಲ್ಲಾರ್ಡ್ ಎಕ್ವಿಪ್‌ಮೆಂಟ್ ಲಿ.(MEL) ಮಿಲಿಟರಿಗೆ ಉತ್ಪನ್ನಗಳನ್ನು ತಯಾರಿಸಿತು.
- ಕೇಂಬ್ರಿಜ್‌ನ ಪೈ ಟೆಲಿಕಮ್ಯುನಿಕೇಷನ್ಸ್ ಲಿ.
- ಮಾಲ್ಮೆಸ್‌ಬರಿ, ವಿಲ್ಟ್‌ಶೈರ್‌ನ TMC ಲಿಮಿಟೆಡ್
ಅಮೆರಿಕಾ ಸಂಯುಕ್ತ ಸಂಸ್ಥಾನಗಳು
[ಬದಲಾಯಿಸಿ]ಫಿಲಿಪ್ಸ್ ಅಮೆರಿಕದ ಪ್ರಧಾನ ಕಾರ್ಯಾಲಯವು ಅನೇಕ ವರ್ಷಗಳ ಕಾಲ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ ನಾರ್ತ್ ಅಮೆರಿಕ ಕಾರ್ಪೊರೇಷನ್, 3000 ಮೈನ್ಯೂಟ್‌ಮೆನ್ ರೋಡ್, ಆಂಡೊವರ್,ಮಸಾಚುಸೆಟ್ಸ್ ಆಗಿತ್ತು. ಉತ್ತರ ಅಮೆರಿಕದ ಮುಖ್ಯ ಕಾರ್ಯಾಲಯವು ನ್ಯೂಯಾರ್ಕ್‌ನಲ್ಲಿ ನೆಲೆಗೊಂಡಿದೆ. ಆದರೆ ಆರೋಗ್ಯಪಾಲನೆಯಲ್ಲಿ ಕಂಪನಿಯ ಹೆಜ್ಜೆಗುರುತು ಹೆಚ್ಚುತ್ತಿದ್ದಂತೆ, ತನ್ನ ಅತೀದೊಡ್ಡ ಉದ್ದಿಮೆ ಕ್ಷೇತ್ರ(ಆರೋಗ್ಯಪಾಲನೆ)ದೊಂದಿಗೆ ಮುಖ್ಯಕಾರ್ಯಾಲಯದ ಕಚೇರಿಯನ್ನು ಮರುನೆಲೆಗೊಳಿಸುವುದು ಔಚಿತ್ಯಪೂರ್ಣವಾಗಿತ್ತು.
ಫಿಲಿಪ್ಸ್ ಲೈಟಿಂಗ್ ಸಾಮರ್‌ಸೆಟ್, ನ್ಯೂ ಜೆರ್ಸಿಯಯಲ್ಲಿ ಕಾರ್ಪೊರೇಟ್ ಕಚೇರಿಯನ್ನು ಹೊಂದಿದೆ.
ಉತ್ಪಾದನೆ ಘಟಕಗಳು ಇಲ್ಲಿವೆ:
- ಡಾನ್ವಿಲ್ಲೆ, ಕೆಂಟುಕಿ
- ಬಾತ್, ನ್ಯೂ ಯಾರ್ಕ್
- ಸೆಲೈನಾ,ಕನ್ಸಾಸ್
- ಪ್ಯಾರಿಸ್, ಟೆಕ್ಸಾಸ್
ವಿತರಣೆ ಕೇಂದ್ರಗಳು ಇಲ್ಲಿವೆ:
- ಮೌಂಟನ್ ಟಾಪ್, ಪೆನ್ಸಿಲ್‌ವೇನಿಯ
- ಆಂಟಾರಿಯೊ, ಕ್ಯಾಲಿಫೋರ್ನಿಯ
- ಮೆಂಫಿಸ್, ಟೆನ್ನೆಸೆ
ಫಿಲಿಪ್ಸ್ ಹೆಲ್ತ್‌ಕೇರ್ ಪ್ರಧಾನಕಾರ್ಯಾಲಯವು ಮಸಾಚುಸೆಟ್ಸ್‌ನ ಆಂಡೋವರ್‌ನಲ್ಲಿದೆ. ಉತ್ತರ ಅಮೆರಿಕ ಮಾರಾಟ ಸಂಸ್ಥೆಯು ಬಾಟ್‌ಹೆಲ್, ವಾಷಿಂಗ್ಟನ್ನಲ್ಲಿ ನೆಲೆಗೊಂಡಿದೆ. ಇಲ್ಲಿ ಕೂಡ ಉತ್ಪಾದನೆ ಸೌಲಭ್ಯಗಳಿವೆ:
- ಆಂಡೊವರ್, ಮಸಾಚುಸೆಟ್ಸ್
- ಬೋಥೆಲ್, ವಾಷಿಂಗ್ಟನ್
- ಕ್ಲೀವ್‌ಲ್ಯಾಂಡ್, ಓಹಿಯೊ
- ಫಾಸ್ಟರ್ ಸಿಟಿ, ಕ್ಯಾಲಿಫೋರ್ನಿಯ
- ಮಿಲ್‌ಪಿಟಾಸ್, ಕ್ಯಾಲಿಫೋರ್ನಿಯ
- ರೀಡ್ಸ್‌ವಿಲ್ಲೆ, ಪೆನ್ಸಿಲ್‌ವ್ಯಾನಿಯ
ನಾಕ್ಸ್‌ವಿಲ್ಲೆ,ಟೆನ್ನೆಸೆಯ ಒಂದು ಕಾರ್ಖಾನೆಯನ್ನು ಮುಚ್ಚಲಾಗಿದೆ. (ಮಾಹಿತಿ ಅಗತ್ಯ.)
ಫಿಲಿಪ್ಸ್ ಕನ್ಸೂಮರ್ ಲೈಫ್‌ಸ್ಟೈಲ್ ಸ್ಟಾಮ್‌ಪೋರ್ಡ್, ಕನೆಕ್ಟಿಕಟ್‌ನಲ್ಲಿ ಕಾರ್ಪೊರೇಟ್ ಕಚೇರಿಯನ್ನು ಹೊಂದಿದೆ. ಇದು ಸ್ನೊಕ್ಯುಲಮಿ, ವಾಷಿಂಗ್ಟನ್‌ನಲ್ಲಿ ಉತ್ಪಾದನಾ ಘಟಕವನ್ನು ಹೊಂದಿದ್ದು,ಸೋನಿಕೇರ್ ವಿದ್ಯುತ್ ಹಲ್ಲುಜ್ಜುವ ಬ್ರಷ್‌ಗಳನ್ನು ಉತ್ಪಾದಿಸುತ್ತದೆ.
ಫಿಲಿಪ್ಸ್ ರಿಸರ್ಚ್ ಬ್ರಿಯಾರ್‌ಕ್ಲಿಫ್ ಮ್ಯಾನರ್, ನ್ಯೂಯಾರ್ಕ್.
2007ರಲ್ಲಿ ಫಿಲಿಪ್ಸ್ ಉತ್ತರ ಅಮೆರಿಕ ದೀಪ ವ್ಯವಸ್ಥೆ ನೆಲೆವಸ್ತುಗಳ(ಲ್ಯುಮಿನೈರ್ಸ್) ಕಂಪನಿ ಜೆಂಟೈಲ್ ಗ್ರೂಪ್ ಇನ್‌ಕಾರ್ಪೊರೇಟೆಡ್ ಜತೆ ನಿರ್ಣಾಯಕ ವಿಲೀನಕ್ಕೆ ಪ್ರವೇಶಿಸಿತು. ಇದರಿಂದ ಉತ್ತರ ಅಮೆರಿಕ ಲ್ಯುಮಿನೈರ್ಸ್(ದೀಪನೆಲೆವಸ್ತು ಎಂದು ಕೂಡ ಹೆಸರಾಗಿದೆ)ನಲ್ಲಿ ಕಂಪನಿಗೆ ಅಗ್ರ ಸ್ಥಾನವನ್ನು ಒದಗಿಸಿತು ಹಾಗು ಸಾಲಿಡ್ ಸ್ಟೇಟ್ ಲೈಟಿಂಗ್( ಅರೆವಾಹಕ ಬೆಳಕುಸೂಸುವ ಡಯೋಡ್ ಬಳಸುವ ಲೈಟಿಂಗ್ ವಿಧಾನ) ಸೇರಿದಂತೆ ವೈವಿಧ್ಯದ ಬಳಕೆಗಾಗಿ ಸಂಬಂಧಿತ ಉತ್ಪನ್ನಗಳನ್ನು ನಿಯಂತ್ರಿಸುತ್ತದೆ. ಕಂಪನಿಯು ರೆಸ್ಪಿರಾನಿಕ್ಸ್ ಸ್ವಾಧೀನಕ್ಕೆ ತೆಗೆದುಕೊಂಡಿತು ಹಾಗು ಅದರ ಆರೋಗ್ಯಪಾಲನೆ ಕ್ಷೇತ್ರಕ್ಕೆ ಗಮನಾರ್ಹ ಲಾಭ ಉಂಟಾಯಿತು.
ಫಿಲಿಪ್ಸ್ ಅದರ ವಿನ್ಯಾಸ,ನಾವೀನ್ಯ ಮತ್ತು ವ್ಯವಹಾರ ಪ್ರಮಾಣಕಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಇದು ತಂತ್ರಜ್ಞಾನ,ಆರೋಗ್ಯಪಾಲನೆ., ವಿದ್ಯುದ್ದೀಪ ಮತ್ತು ಗ್ರಾಹಕ ಉತ್ಪನ್ನಗಳಲ್ಲಿ ವಿಶ್ವದ ಪ್ರಮುಖ ನವನಿರ್ಮಿತಿಕಾರ ಕಂಪನಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ.
ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ ಉತ್ಪನ್ನಗಳು
[ಬದಲಾಯಿಸಿ]1951 – ಫಿಲ್‌ಶೇವ್ ಎರಡು ತಲೆಯ ಆವರ್ತಕ ಶೇವರ್ ಮಾರುಕಟ್ಟೆಗೆ ಪರಿಚಯ. ನಾರೆಲ್ಕೊ ಹೆಸರಿನಲ್ಲಿ USAನಲ್ಲಿ ಮಾರಾಟಕ್ಕಿಡಲಾಗಿದೆ.
1963 –ಕಾಂಪ್ಯಾಕ್ಟ್ ಕ್ಯಾಸೆಟ್ ಪರಿಚಯ.
1963 – ಪ್ರಥಮ ದೇಶೀಯ ಗೃಹ ವಿಡಿಯೊ ಟೇಪ್ ರೆಕಾರ್ಡರ್ ಪರಿಚಯ 405 ಲೈನ್ 1" ಟೇಪ್ ರೀಲ್ ಮಾದರಿ EL3400.
1978 – 1960ರ ದಶಕದಲ್ಲಿ ಆವಿಷ್ಕರಿಸಿದ ತಂತ್ರಜ್ಞಾನ ಬಳಸಿಕೊಂಡು ಲೇಸರ್‌ಡಿಸ್ಕ್ ಪ್ಲೇಯರ್ ಪರಿಚಯಿಸಿತು.
1978 – ಫಿಲಿಪ್ಸ್ ವಿಡಿಯೊಪ್ಯಾಕ್ G7000 (ಬಲದ ಚಿತ್ರ), ಮ್ಯಾಗ್ನವೋಕ್ಸ್ ವಿಭಾಗ ಅಭಿವೃದ್ಧಿಮಾಡಿದ ಗೃಹ ವಿಡಿಯೋ ಆಟದ ಉಪಕರಣ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿಒಡಿಸ್ಸಿ2 ಉಪಕರಣ ಹೆಸರಿನಲ್ಲಿ ಮಾರಾಟವಾಯಿತು. ಉಪಕರಣದ ವೈವಿಧ್ಯದ ರೂಪಗಳು ವಿಶ್ವಾದ್ಯಂತ 1984ರಲ್ಲಿ ಮಾರಾಟವಾಯಿತು.
1979 –ವಿಡಿಯೊ 2000-ಸಿಸ್ಟಮ್ ಪರಿಚಯ ತಾಂತ್ರಿಕವಾಗಿ ಮೇಲ್ಮಟ್ಟದ ವಿನ್ಯಾಸ,ಆದರೆ ವಾಣಿಜ್ಯ ವೈಫಲ್ಯ.
1982 – ಕಾಂಪ್ಯಾಕ್ಟ್ ಡಿಸ್ಕ್ಸೋನಿ ಜತೆ ಸಹಭಾಗಿತ್ವದಲ್ಲಿ ಬಿಡುಗಡೆ
1983 – MSX ಗೃಹ ಕಂಪ್ಯೂಟರ್ ಪ್ರಮಾಣಕದ ಅಭಿವೃದ್ಧಿಯಲ್ಲಿ ಸಹಭಾಗಿ. ಈ ಕಂಪ್ಯೂಟರ್ ಪ್ರಮಾಣಕವು ಜಪಾನ್ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಮುಖ್ಯವಾಗಿ ಜನಪ್ರಿಯವಾಗಿತ್ತು.
1991 – CD-i ಪರಿಚಯ. ಕಾಂಪ್ಯಾಕ್ಟ್ ಡಿಸ್ಕ್ ಇಂಟರಾಕ್ಟಿವ್ ಸಿಸ್ಟಮ್ ಅನೇಕ ವಿಡಿಯೊ ಗೇಮ್ ಕನ್ಸೋಲ್ ವಿಧದ ಲಕ್ಷಣಗಳನ್ನು ಹೊಂದಿದೆ.,[೨೦] ಆದರೆ ಮಾರಾಟದಲ್ಲಿ ಯಶಸ್ವಿಯಾಗಲಿಲ್ಲ.
1992 –ದುರದೃಷ್ಟದ ಡಿಜಿಟಲ್ ಕಾಂಪ್ಯಾಕ್ಟ್ ವಿನ್ಯಾಸ ಬಿಡುಗಡೆ
1995 – ಅಟಾರಿಗಾಗಿ ಅಟಾರಿ ಜಾಗರ್'ಸ್ CD ಸೇರ್ಪಡೆ ತಯಾರಿಕೆ
1999 – ಸೂಪರ್ ಆಡಿಯೊ CD ಸೋನಿ ಜತೆ ಸಹಭಾಗಿತ್ವ.
2000 - ದೀಪನೆಲೆವಸ್ತು ಇರಿಡಿಯಂ ಬಿಡುಗಡೆ
2001 – ಸೆನ್ಸಿಯೊ ಕಾಫಿ ತಯಾರಕ ಯಶಸ್ವಿ ಆರಂಭ, ಮೊದಲಿಗೆ ನೆದರ್‌ಲ್ಯಾಂಡ್ಸ್ ಹಾಗು 2002ರಿಂದ ಯುರೋಪ್‌ನಾದ್ಯಂತ ಇತರ ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಬಿಡುಗಡೆ. ಇದು ಸಾಂಪ್ರದಾಯಿಕ ತಯಾರಿಕೆಯ ಕಾಫಿ ಬೀಜದ ಪುಡಿಗಳನ್ನು ಹೊಂದಿರುವ ಪ್ಯಾಡ್‌ಗಳಿಂದ ಕಾಫಿ ತಯಾರಿಸುವ ವಿಧಾನ. ಮೂಲ ಸೆನ್ಸಿಯೊ ಪ್ಯಾಡ್‌ಗಳನ್ನು ಡೋವೆ ಎಗ್ಬರ್ಟ್ಸ್ ಉತ್ಪಾದಿಸುತ್ತದೆ. ಸೆನ್ಸಿಯೊ 2004ರಿಂದ USನಲ್ಲಿ ಲಭ್ಯವಿದೆ.
2004 – ಫಿಲಿಪ್ಸ್ ಹೋಮ್‌ಲ್ಯಾಬ್ಸ್ ಸಂಶೋಧನಾ ಕೇಂದ್ರವು ಮೀರಾವಿಷನ್ ಟೆಲಿವಿಷನ್ ಮಾರ್ಗದಲ್ಲಿ ಬಳಸಿದ ಮಿರರ್ TVತಂತ್ರಜ್ಞಾನವನ್ನು ಸೃಷ್ಟಿಸಿತು.
2006 –ಸೋನಿ ಜತೆ ಸಹಭಾಗಿತ್ವದಲ್ಲಿ ಬ್ಲು-ರೆ ಡಿಸ್ಕ್ಪ್ರಾರಂಭ.
2008 – WOW VXತಂತ್ರಜ್ಞಾನದೊಂದಿಗೆ ಫ್ಲಾಟ್‌ಸ್ಕ್ರೀನ್ ಪ್ರಾರಂಭ (3D ಟಿವಿ)
2008 – UK ಮಾರುಕಟ್ಟೆಗೆ ಫಿಲಿಪ್ಸ್ ಇಂಟಿಮೇಟ್ ಮ್ಯಾಸೇಜರ್ಸ್‌ನ ರಿಲೇಷನ್‌ಶಿಪ್ ಕೇರ್ ಸಾಲಿನ ಪರಿಚಯ.
ಕಂಪನಿಯು ಪ್ರತಿಯೊಂದು ಉತ್ಪಾದಿತವಾದ DVDಗೆ ರಾಯಧನ ಸ್ವೀಕರಿಸುತ್ತದೆ[೨೧]
2009 – Philips Cinema 21:9 TV ಅಗಲತೆರೆ ವಿಧಾನದಲ್ಲಿ HDTVಗಳು ಅಗಲ, ಉದ್ದದ ಅನುಪಾತ(ಆಸ್‌ಪೆಕ್ಟ್ ರೇಷಿಯೊ) ಬಳಸಿಕೊಂಡು LCD ಪ್ರದರ್ಶಿಸುತ್ತದೆ.
ಆರೋಗ್ಯಪಾಲನೆ ಉತ್ಪನ್ನಗಳು
[ಬದಲಾಯಿಸಿ]ಇಮೇಜಿಂಗ್ ಸಿಸ್ಟಮ್ಸ್(ಚಿತ್ರತೆಗೆಯುವ ವ್ಯವಸ್ಥೆಗಳು)
[ಬದಲಾಯಿಸಿ]- ಹೃದಯ/ನಾಳಗಳ ಎಕ್ಸ್-ರೇ
- ಕಂಪ್ಯೂಟರ್ ಬಳಸಿದ ತಲಲೇಖ (CT)
- ಪ್ರತಿದೀಪ್ತಿ ದರ್ಶನ
- ಕಾಂತೀಯ ಅನುರಣ ಚಿತ್ರ (MRI)
- ಮೊಬೈಲ್ C-ಆರ್ಮ್‌ಗಳು
- ಬೈಜಿಕ ವೈದ್ಯಶಾಸ್ತ್ರ
- PET (ಪಾಸಿಟ್ರಾನ್ ಹೊಮ್ಮುವ ತಲಲೇಖ)
- PET/CT
- ರೇಡಿಯಾಗ್ರಫಿ
- ವಿಕಿರಣ ಗಂತಿಶಾಸ್ತ್ರ ಸಿಸ್ಟಮ್‌ರೂಟ್ಸ್
- ಶಬ್ದಾತೀತ
ರೋಗನಿರ್ಣಯದ ಮೇಲ್ವಿಚಾರಣೆ
[ಬದಲಾಯಿಸಿ]- ರೋಗನಿರ್ಣಯದ ECG
ಡಿಫೈಬ್ರಿಲೇಟರ್‌ಗಳು(ಹೃದಯ ಬಡಿತ ಸುಸ್ಥಿತಿಗೆ ತರುವ ಉಪಕರಣ)
[ಬದಲಾಯಿಸಿ]- ಪರಿಕರಗಳು
- ಸಲಕರಣೆ
- ಸಾಫ್ಟ್‌ವೇರ್
ಗ್ರಾಹಕ
[ಬದಲಾಯಿಸಿ]- ಫಿಲಿಪ್ಸ್ AVENT
ರೋಗಿ ಆರೈಕೆ ಮತ್ತು ವಸ್ತುನಿಷ್ಠ ಮಾಹಿತಿ ವಿಜ್ಞಾನ
[ಬದಲಾಯಿಸಿ]ಅರಿವಳಿಕೆ ಅನಿಲ ಮೇಲ್ವಿಚಾರಣೆ
- ರಕ್ತದೊತ್ತಡ
- ಕ್ಯಾಪ್‌ನೋಗ್ರಫಿ(ಇಂಗಾಲದ ಡೈಆಕ್ಸೈಡ್ ಸಾಂದ್ರತೆ ಪರಿಶೀಲನೆ)
- ರೋಗನಿರ್ಣಯದ ನಿದ್ರೆ ಪರೀಕ್ಷೆ
- D.M.E.
- ECG
- ಎಂಟರ್‌ಪ್ರೈಸ್ ಪೇಷೆಂಟ್ ಇನ್ಫೋರ್ಮೆಟಿಕ್ಸ್ ಸೊಲ್ಯೂಷನ್ಸ್
- OB ಟ್ರೇಸ್‌ವ್ಯೂ
- ಕಂಪ್ಯೂರ್‌ಕಾರ್ಡ್
- ICIP
- eICU ಕಾರ್ಯಕ್ರಮ
- ಎಮರ್ಜಿನ್
- eICU ಕಾರ್ಯಕ್ರಮ
- ICIP
- ಕಂಪ್ಯೂರ್‌ಕಾರ್ಡ್
- ಹೇಮೋಡೈನಾಮಿಕ್(ರಕ್ತಪರಿಚಲನೆ ಅಧ್ಯಯನ)
- iSite PACS
- ಬಹು-ಮಾಪನ ಸರ್ವರ್ಸ್
- ನ್ಯೂರೊಫೀಡಿಯೋಲ್ಸ್
- ನಾಡಿ ಆಕ್ಸಿಮಿಟ್ರಿ
- ಉಷ್ಣಾಂಶ
- ರಕ್ತದ ಅನಿಲ ನಿಗಾ
- ವಾತಾಯನ ವ್ಯವಸ್ಥೆ
- ವಿವ್‌ಫೋರಂ
- ಕ್ಸೆಲೆರಾ
- XIRIS
ಇವನ್ನೂ ಗಮನಿಸಿ
[ಬದಲಾಯಿಸಿ]- ಪ್ಲೋರೆಸೆಂಟ್ ಲ್ಯಾಂಪ್
- ಫಿಲಿಪ್ಸ್ ರೆಕಾರ್ಡ್ಸ್
- ಫಿಲಿಪ್ಸ್ ಕ್ಲಾಸಿಕ್ಸ್ ರೆಕಾರ್ಡ್ಸ್
- ಸ್ಪೀಚ್‌ಮ್ಯಾಜಿಕ್
ಸ್ವತಂತ್ರ
[ಬದಲಾಯಿಸಿ]- ASML ಹೋಲ್ಡಿಂಗ್
- ಆಟಸ್ ಒರಿಜಿನ್
- NXP ಅರೆವಾಹಕಗಳು
- ಪಾನಾಲಿಟಿಕಲ್
- ಲಿಕ್ವಾವಿಸ್ಟಾ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ ೧.೬ "Annual Results 2009" (PDF). Philips. Retrieved 25 ಜನವರಿ 2010. ಉಲ್ಲೇಖ ದೋಷ: Invalid
<ref>
tag; name "AR2009" defined multiple times with different content - ↑ Kunstlichtkunst.nl Archived 6 March 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಸೆಂಟ್ರಮ್ ಕನ್ಸ್‌ಟಿಲಿಕ್ಟ್
- ↑ "ಎಬೌಟ್ ಫಿಲಿಪ್ಸ್ – ರಾಯಲ್ ಫಿಲಿಪ್ಸ್". Archived from the original on 7 ಫೆಬ್ರವರಿ 2006. Retrieved 25 ಅಕ್ಟೋಬರ್ 2010.
- ↑ ನ್ಯಾಯನಿಷ್ಠ ರಾಷ್ಟ್ರಗಳ ವಿಶ್ವಕೋಶ: ಹತ್ಯಾಕಾಂಡದ ಸಂದರ್ಭದಲ್ಲಿ ಯಹೂದಿಗಳ ರಕ್ಷಕರು:ನೆದರ್‌ಲ್ಯಾಂಡ್ಸ್ ಜರುಸಲೇಂ: ಯಾಡ್ ವಶೇಂ, 2004, pp.596–597
- ↑ "BFI – Film & TV Database – The PHILIPS TIME MACHINE (1977)". The British Film Institute Web Database. Archived from the original on 19 ಸೆಪ್ಟೆಂಬರ್ 2009. Retrieved 16 ಫೆಬ್ರವರಿ 2010.
- ↑ NRC ಹ್ಯಾಂಡಲ್ಸ್‌ಬ್ಲಾಡ್, 4 ಸೆಪ್ಟೆಂಬರ್, 2010 Het nieuwe Philips wordt blij van een iPad-hoesje/The new ಫಿಲಿಪ್ಸ್ becomes happy from an iPad cover, Dutch original:" 'We zijn geen high-tech bedrijf meer, het gaat erom dat de technologieën introduceren die breed gedragen worden door de consument', zegt Valk [..] Consumer Lifestyle is nu zodanig ingericht dat er geen jaren meer gewerkt wordt aan uitvindingen die weinig kans van slagen hebben. [..] De Philips staf windt er geen doekjes om dat het bedrijf niet altijd voorop loopt bij de technologische ontwikkelingen in consumentengoederen."
- ↑ IP.Philips.com
- ↑ "LedsMagazine.com". Archived from the original on 31 ಜನವರಿ 2010. Retrieved 25 ಅಕ್ಟೋಬರ್ 2010.
- ↑ "LedsMagazine.com". Archived from the original on 24 ನವೆಂಬರ್ 2010. Retrieved 25 ಅಕ್ಟೋಬರ್ 2010.
- ↑ 16.08.2007, ಫಿಲಿಪ್ಸ್ ಟು ಅಕ್ವೈರ್ ಹೆಲ್ತ್‌ಕೇರ್ ಇನ್ಫೋರ್ಮೆಟಿಕ್ಸ್ ಕಂಪನಿ XIMIS ಇಂಕ್. ಟು ಸ್ಟ್ರೆಂತನ್ ಪ್ರೆಸೆನ್ಸ್ ಇನ್ ದಿ ಹೆಲ್ತ್‌ಕೇರ್ ಇನ್ಫೊರ್ಮೇಶನ್ ಟೆಕ್ನಾಲಜಿ ಮಾರ್ಕೆಟ್
- ↑ NewsCenter.philips.com
- ↑ "Raedius.com". Archived from the original on 10 ಜನವರಿ 2019. Retrieved 10 ಆಗಸ್ಟ್ 2021.
- ↑ "Polymervision.com". Archived from the original on 30 ಸೆಪ್ಟೆಂಬರ್ 2019. Retrieved 25 ಅಕ್ಟೋಬರ್ 2010.
- ↑ "Aprico.tv". Archived from the original on 11 ಏಪ್ರಿಲ್ 2012. Retrieved 10 ಆಗಸ್ಟ್ 2021.
- ↑ Eira.com.br[ಶಾಶ್ವತವಾಗಿ ಮಡಿದ ಕೊಂಡಿ]
- ↑ ಫಿಲಿಪ್ಸ್ ಓಪನ್ಸ್ ಲೈಟಿಂಗ್ ಸೆಂಟರ್ ಇನ್ ಚೈನಾ[ಶಾಶ್ವತವಾಗಿ ಮಡಿದ ಕೊಂಡಿ] ಆಟೊಮೋಟಿವ್ ನ್ಯೂಸ್ ರಿಪೋರ್ಟ್ – 1 ಮೇ 2008
- ↑ ೧೭.೦ ೧೭.೧ (ಕಂಪನಿ ಪ್ರೊಫೈಲ್– ಫಿಲಿಪ್ಸ್ ಹಾಂಕಾಂಗ್)
- ↑ Philips Israel- Company Overview, retrieved 1 ಮೇ 2010
- ↑ "ಆರ್ಕೈವ್ ನಕಲು". Archived from the original on 20 ಜನವರಿ 2022. Retrieved 20 ಜನವರಿ 2022.
- ↑ Philipcscdi.com Archived 25 July 2017[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಹಿಸ್ಟರಿ ಆಫ್ ಫಿಲಿಪ್ಸ್ CD-i
- ↑ "ಹೌ ಕ್ಯಾನ್ ಪೇಪರ್ಸ್ ಅಫೋರ್ಡ್ ಟು ಗೀವ್ ಎವೆ DVDs?", news.bbc.co.uk , The BBC, 11 October 2005. 2007 ರ ಜುಲೈ 29 ರಂದು ಪುನಃ ಸಂಪಾದಿಸಲಾಯಿತು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- ರಾಯಲ್ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ NV – ಫ್ಯಾಕ್ಟ್ ಶೀಟ್– ಹೂವರ್ಸ್ ಆನ್‌ಲೈನ್
- ಫೋಟೊ ಹಿಸ್ಟರಿ ಆಫ್ ಫಿಲಿಪ್ಸ್ ಎಂಡ್ ಐಂಡ್‌ಹೋವನ್ Archived 21 December 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- Pages with reference errors
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- Articles with invalid date parameter in template
- Articles with hatnote templates targeting a nonexistent page
- Companies listed on the New York Stock Exchange
- Articles with unsourced statements from January 2009
- Articles with unsourced statements from September 2009
- CS1 errors: empty citation
- Articles with multiple maintenance issues
- Pages using multiple issues with unknown parameters
- Commons link is locally defined
- Official website different in Wikidata and Wikipedia
- Use dmy dates from August 2010
- ಧ್ವನಿವರ್ಧಕ ಯಂತ್ರದ ತಯಾರಕರು
- ನೆದರ್ಲೆಂಡ್ನಲ್ಲಿ ಪ್ರಧಾನಕಾರ್ಯಾಲಯ ಹೊಂದಿರುವ ಬಹುರಾಷ್ಟ್ರೀಯ ಕಂಪನಿಗಳು
- ಫಿಲಿಪ್ಸ್
- ಸಣ್ಣ ಉಪಕರಣ ಉತ್ಪಾದಕರು
- ಸಾಗಿಸಬಹುದಾದ ಆಡಿಯೊ ಪ್ಲೇಯರ್ ಉತ್ಪಾದಕರು
- ಗ್ರಾಹಕ ಬ್ಯಾಟರಿ ಉತ್ಪಾದಕರು
- ಲೈಟಿಂಗ್ ಬ್ರಾಂಡ್ಸ್
- 1891ರಲ್ಲಿ ಸ್ಥಾಪನೆಯಾದ ಕಂಪನಿಗಳು
- ಶೇವಿಂಗ್
- ವಿಡಿಯೊಟೆಲಿಫೋನಿ
- ಉದ್ಯಮ